ನವದೆಹಲಿ: ಈಗಾಗಲೇ ನಿಷೇಧಕ್ಕೊಳಗಾಗಿರುವ 500ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಇಟ್ಟುಕೊಳ್ಳುವುದು ಇನ್ನು ಮುಂದೆ ಕಾನೂನುಬಾಹಿರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ.
ರಾಷ್ಟ್ರಪತಿಗಳು ಫೆಬ್ರವರಿ 27ರಂದು Specified Bank Notes (Cessation of Liabilities) Bill, 2017ಗೆ ಅಂಕಿತ ಹಾಕಿದ್ದು, ಆ ಬಳಿಕದಿಂದ ಅದು ಕಾನೂನಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಈ ಮಸೂದೆ ಅನುಮೋದನೆಗೊಂಡಿತ್ತು, ಇದರ ಪ್ರಕಾರ 500 ಮತ್ತು 1000 ರೂ ನೋಟುಗಳನ್ನು ಇಟ್ಟುಕೊಳ್ಳುವುದು, ವರ್ಗಾವಣೆ ಮಾಡುವುದು, ಸ್ವೀಕರಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಈ ಕಾನೂನನ್ನು ಮೀರಿ ನಿಷೇಧಿತ ನೋಟುಗಳನ್ನು ಹೊಂದಿದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ದೇಶದಿಂದ ಹೊರಗಿದ್ದವರಿಗೆ ನೋಟುಗಳನ್ನು ಮರಳಿಸಲು 3 ತಿಂಗಳುಗಳ ಅವಕಾಶಗಳನ್ನು ಈ ಮಸೂದೆಯಲ್ಲಿ ನೀಡಲಾಗಿದೆ. ಸುಳ್ಳು ಘೋಷಣೆ ಮಾಡಿದವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಅಧ್ಯಯನ, ಸಂಶೋಧನೆಗಳಿಗಾಗಿ 25 ನೋಟುಗಳನ್ನು ಹೊಂದಬಹುದಾಗಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.