ಧಾರವಾಡ: ನಿಸರ್ಗ ದೇವತೆ ಸುಂದರ ಜಗತ್ತು ನಿರ್ಮಿಸಿದೆ. ಸಾವಿರ ವರ್ಷ ನೋಡಿದರೂ ಬೇಸರವಾಗಲ್ಲ. ಎಷ್ಟೊಂದು ರೀತಿಯ ಬಣ್ಣ, ಆಕಾರ, ಅದ್ಭುತ ಸಿರಿ, ಸಂಪತ್ತು ಇದೆ. ನಮಗೆ ನೋಡಿ, ಕೇಳಿ, ಅನುಭವಿಸಿ, ಬದುಕನ್ನು ಸಮೃದ್ಧ ಮಾಡಿಕೊಳ್ಳಲು ಇದೆಲ್ಲ ಅನುಭವಿಸಲಿಕ್ಕೆ ಎಲ್ಲ ಸಲಕರಣ ಕೊಟ್ಟಿದೆ. ಆದರೆ ಬದುಕಿಗೆ ಹೃದಯ ಶ್ರೀಮಂತಿಕೆ ಮುಖ್ಯ. ಈ ವೈಭವ ಕಣ್ಣ ತೆಗೆದು ನೋಡಿ.
ಕಾರ್ಯ ಮಾಡಲಿಕ್ಕ ದೇಹ ಕೊಟ್ಟಿದೆ. ಇದನ್ನ ಅರಿಯಲಿಕ್ಕೆ ಬುದ್ಧಿ, ಅನುಭವಿಸಲು ಹೃದಯ ಕೊಟ್ಟಿದೆ. ಇದರಿಂದ ನಮ್ಮ ಹೃದಯ ನೋಡಿ, ಕೇಳಿ, ಮಾಡಿ ಅನುಭವಿಸಿ ಶ್ರೀಮಂತಗೊಳಿಸಬೇಕು. ಹಾಗೆ ಮಾಡಿದವರೇ ಶರಣರು, ಸಂತರು ದಾರ್ಶನಿಕರು, ಅನುಭಾವಿಗಳು. ನಾವು ನೋಡಿ ಹೋಗಲಿಕ್ಕ ಬಂದವರು. ಈ ಅವಕಾಶವನ್ನು ಯಾವುದಕ್ಕೆ ಬಳಸಬಾರದು ಅಂತ ಗೊತ್ತಿರಬೇಕು.
ದೇಹ ಕಾರ್ಯದ ಕರಣ, ಬುದ್ಧಿ ಅರಿವಿನ ಕರಣ, ಜಗತ್ತು ಕೆಡಿಸಬಾರದು. ಮನುಷ್ಯನನ್ನು ತಣಿಸಲು ಯಾರಿಂದಲೂ ಆಗಲ್ಲ. ನಾವು ಭಿಕ್ಷೆ ಬೇಡಲು ಬಂದಿಲ್ಲ. ನಿಸರ್ಗ ನೋಡಿ ಶ್ರೀಮಂತಗೊಳಿಸಿಲಿಕ್ಕೆ ಬಂದವರ. ಹಕ್ಕಿ ಹಂಗ ಹಾರಿ, ಜಗತ್ತನ್ನ ನೋಡಿ ಆನಂದಿಸಿ, ಹಾಡಿ ಹಾಡಿ ಶ್ರೀಮಂತಗೊಳಿಸುವುದಕ್ಕೆ ಬಂದೀವಿ ಅಂತ ತಿಳಿದುಕೊಳ್ಳಬೇಕು. ಆದರೆ, ಎಲ್ಲೆಲ್ಲೆ ನೋಡಿದರೂ ಬರೀ ಜಗಳ.
ಶರೀರ, ಮನಸ್ಸು, ಬುದ್ದಿ ಭಿಕ್ಷೆ ಬೇಡಲು ಅಲ್ಲ. ವಿಶ್ವವನ್ನು ಅರಿಯಲು, ಸುಂದರ ಕಾರ್ಯ ಮಾಡಲು ಇರೋದು. ನೂರು ವರ್ಷದಾಗ ಮೊದಲಿನ ಹತ್ತಿಪ್ಪತ್ತ ಹಂಗ ಮತ್ತ ಹತ್ತಪ್ಪಿತ್ತ ವರ್ಷ ಹೋಗಬಿಡತಾವ, ಆಗ ಹೋರಾಟ, ರಕ್ತಪಾತ, ಭಿಕ್ಷೆ ಯಾಕೆ ? ವಿಶ್ವದಲ್ಲಿ ಆನಂದ ಪಡಕ್ಕ ಏನಿಲ್ಲ ಹೇಳಿ? ಇಷ್ಟೆಲ್ಲ ಮಾಡೋದು ಏತಕ್ಕೆ ಅಂತ ಗೊತ್ತಿರಬೇಕು.
ಮನಸ್ಸು ಸ್ವಚ್ಛಂದವಾಗಿರಬೇಕು, ಬಂಧ ಮುಕ್ತವಾಗಿರಬೇಕು. ಆನಂದಿಸುವ ಹೃದಯ ಸಾಕಲ್ಲ. ಎಲ್ಲವೂ ಇಲ್ಲಿರುವುದು. ನಾವು ಏನೂ ತಂದಿಲ್ಲ. ಕೆಲ ದಿನ ಬದುಕುವುದು. ಖಾಲಿ ತಲೆ, ಮೈ ಹಾಗೂ ಎದಿ ಬೆಳಸೋದ ಅಲ್ಲ. ಮೂರು ಸಮಾನವಾಗಿ ಬೆಳೆಸಬೇಕು. ಸತ್ಯ ಅಡಗಿರಬೇಕು. ಮಧುರ ಮಧುರವಾಗಿ ಅನುಭವಿಸುವ ಎದಿ ಇರಬೇಕು. ಮನುಷ್ಯ ನೋಡು ಜಗತ್ತ ಹ್ಯಾಂಗದ.
ಚೆನ್ನಾಗಿ ಕೆಲಸ ಮಾಡಕೋತ ಬದುಕುವುದು ಯೋಗ. ಆಸೆ ರಹಿತ, ದೈಹಿಕ ಸುಂದರ ಕಾರ್ಯಗಳಿಗೆ ಮಾಡುವುದು ಕರ್ಮ ಯೋಗ. ಇದರಿಂದ ಮನಸ್ಸು ಮುಕ್ತಿ. ಬಂಧ ಮುಕ್ತಿ. ಅಂತಹ ಸುಂದರ ಕಾರ್ಯ ದಿನೇ ದಿನೇ ಮಾಡಿ. ಸಂತೋಷ ಪಡೋದು, ಚಲೋ ಇರೋದು, ಸುಮ್ಮನ ಕೇಳಿ ಆನಂದ ಪಡೋದು, ಸತ್ಸಂಗವೇ ಕರ್ಮಯೋಗ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 5 ನೇ ದಿನ 01-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.