ನವದೆಹಲಿ: ಮಯನ್ಮಾರ್ ಮತ್ತು ಪಾಕಿಸ್ಥಾನ ಆಕ್ರಮಿತ ಜಮ್ಮು ಕಾಶ್ಮೀರದ ಗಡಿಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಈಗಾಗಲೇ ತನ್ನ ಸಾಮರ್ಥ್ಯ ಏನು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿರುವ ಭಾರತೀಯ ಸೇನೆ ಇದೀಗ ತನ್ನ ವಿಶೇಷ ಪಡೆಗಳನ್ನು ಆಧುನೀಕರಿಸಿ ಅವುಗಳಿಗೆ ಮತ್ತಷ್ಟು ಬಲ ತುಂಬುವ ಕಾರ್ಯಕ್ಕೆ ಮುಂದಾಗಿದೆ.
ಹೊಸ ಬಂದೂಕುಗಳನ್ನು, ಸ್ನಿಪರ್ ರೈಫಲ್ಸ್, ಸಾಮಾನ್ಯ ಬಳಕೆ ಮೆಶಿನ್ ಗನ್, ಕಡಿಮೆ ತೂಕದ ರಾಕೆಟ್ ಉಡಾವಣೆಗಳು, ಯುದ್ಧತಂತ್ರದ ಶಾಟ್ಗನ್ಸ್, ಪಿಸ್ತೂಲ್, ನೈಟ್ ವಿಶನ್ ಡಿವೈಸ್ ಮತ್ತು ಶಸ್ತ್ರಾಸ್ತ್ರಗಳನ್ನು ವಿಶೇಷ ಪಡೆಗಳಿಗೆ ಅಳಪಡಿಸಿಕೊಳ್ಳಲು ಸೇನೆ ಮುಂದಾಗಿದ್ದು, ಇವುಗಳನ್ನು ಖರೀದಿ ಮಾಡುವ ಸಲುವಾಗಿ ವಿದೇಶಿ ಶಸ್ತ್ರಾಸ್ತ್ರ ಕಂಪನಿಗಳನ್ನು ಆಯ್ಕೆ ಮಾಡಲು ನಿರ್ಬಂಧಿತ ಟೆಂಡರ್ಗಳನ್ನು ಹೊರಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅಮೆರಿಕ, ಇಸ್ರೇಲ್, ಸ್ಟೀಡಿಶ್ ಮತ್ತು ಇತರ ದೇಶಗಳ ಕಂಪನಿಗಳಿಗೆ ಕಳೆದ ವಾರ ಏಳು ಟೆಂಡರ್ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ, ಕ್ಷಿಪ್ರ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ಪ್ರಭಾವಶಾಲಿ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅಲ್ಲದೇ ಹೆಲಿಕಾಫ್ಟರ್ಗಳಲ್ಲೂ ಸಾಗಾಟ ಮಾಡಲು ಸಾಧ್ಯವಾಗುವಂತಹ 120 ಲಘು ಯುದ್ಧ ಕಾರ್ಯಚರಣೆ ಪರಿಕರಗಳನ್ನು ಕೊಂಡುಕೊಳ್ಳುವ ಪ್ರಕ್ರಿಯೆಗಳೂ ನಡೆದಿವೆ.
ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವ ಭಾರತೀಯ ಸೇನೆ ತನ್ನ ಕಮಾಂಡೋ ಪಡೆಗಳನ್ನು ಮತ್ತಷ್ಟು ಬಲಿಷ್ಠ ಮತ್ತು ಪರಾಕ್ರಮಿಗಳನ್ನಾಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.