ತಮ್ಮ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದರೂ ಅವರ ಬದುಕು ಮಾದರಿಯಾಗಿದೆ. ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಅನೇಕ ಜನರಿಗೆ ಕ್ಯಾನ್ಸರ್ ಪರಿಣಾಮ, ಕಾರಣ ಹಾಗೂ ಪರಿಹಾರದ ಕುರಿತು ತಿಳಿಸುತ್ತಾರೆ. ಧ್ವನಿ ಕಳೆದುಕೊಂಡಿದ್ದರೂ ಅವರು ಸಮಾಜದ ದನಿಯಾಗಿದ್ದಾರೆ.
ಹೌದು. ನಳಿನಿ ಸತ್ಯನಾರಾಯಣ ಎಂಬುವರೇ ಗಂಟಲು ಕ್ಯಾನ್ಸರ್ಗೆ ತುತ್ತಾಗಿ ತಮ್ಮ ಧ್ವನಿ ಪೆಟ್ಟಿಗೆಯನ್ನೇ ಕಳೆದುಕೊಂಡಿದ್ದರು. ಅವರ ಯಜಮಾನರು ವಿಪರೀತ ಸಿಗರೇಟ್ ಸೇದುತ್ತಿದ್ದರು. ಅದರ ಹೊಗೆಯ ಪರಿಣಾಮ ಕ್ಯಾನ್ಸರ್ ಇವರನ್ನೂ ಆವರಿಸಿತ್ತು. ಪರಿಣಾಮ ಧ್ವನಿ ಪೆಟ್ಟಿಗೆಯನ್ನೇ ಅದು ಕಸಿದುಕೊಂಡಿತು.
2010 ರಲ್ಲಿ ಇವರಿಗೆ ಕ್ಯಾನ್ಸರ್ ಇರುವುದು ಗಮನಕ್ಕೆ ಬಂದಿದೆ. ಸೂಕ್ತ ಶಸ್ತ್ರ ಚಿಕಿತ್ಸೆಯನ್ನು ಅವರು ಪಡೆದಿದ್ದು, ರೇಡಿಯೇಶನ್ ಥೆರಪಿಯೂ ಆಗಿದೆ. ಆದರೆ ಗಂಟಲು ಕ್ಯಾನ್ಸರ್ ವ್ಯಾಪಿತ ಧ್ವನಿ ಪೆಟ್ಟಿಗೆ ಪ್ರದೇಶದಲ್ಲಿ ಏನೂ ಮಾಡಲು ಸಾಧ್ಯವಿರದಿದ್ದಾಗ, ಅದನ್ನೇ ತೆಗೆದು ಅಲ್ಲಿ ಕೃತಕ ಧ್ವನಿ ಪೆಟ್ಟಿಗೆ (prosthesis) ಕೂಡಿಸಲಾಗಿದೆ. ಇದರಿಂದ ಅವರಿಗೆ ಮಾತನಾಡಲು ಅನುಕೂಲವಾಗಿದೆ.
ಸಾಮಾನ್ಯವಾಗಿ 20 ರಿಂದ 30 ಸಾವಿರ ಬೆಲೆ ಬಾಳುತ್ತದೆ ಕೃತಕ ಅಂಗಕ್ಕೆ. ನಳಿನಿ ಅವರು ಭಾರತೀಯ ಗ್ರಂಥಿಶಾಸ್ತ್ರಜ್ಞರೋರ್ವರು ತಯಾರಿಸಿದ ಎಯುಎಂ (prosthesis) ಪ್ರಾಸ್ಥಿಸೀಸ್ ಬಳಸುತ್ತಿದ್ದು, ಇದರ ಬೆಲೆ ಕೇವಲ 50 ರೂಪಾಯಿ ಮಾತ್ರ. ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ನಳಿನಿ ಅವರ ಕಷ್ಟಕಾಲದಲ್ಲಿ ತುಂಬಾ ಸಹಕರಿಸದರಂತೆ.
ತಂಬಾಕು ಸೇವನೆಯಿಂದಾಗುವ ಜೀವಹಾನಿ ಕುರಿತು ನಳಿನಿ ಅವರು ರಾಜ್ಯದಾದ್ಯಂತ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ವೈಸ್ ಆಫ್ ಟೊಬ್ಯಾಕೊ ವಿಕ್ಟಿಮ್ಸ್ ಹಾಗೂ ಪಿಂಕ್ ಹೋಪ್ ಸಪೋರ್ಟ್ ಗ್ರುಪ್ ಈ ಸಂಸ್ಥೆಗಳ ಸದಸ್ಯತ್ವವನ್ನೂ ನಳಿನಿ ಪಡೆದಿದ್ದಾರೆ.
ವ್ಯಕ್ತಿಗತವಾಗಿ, ಕಾರ್ಯಾಗಾರಗಳ ಮೂಲಕ, ಕಾನೂನು ತಜ್ಞರ ಸಮ್ಮುಖದಲ್ಲಿ ಈ ಕುರಿತು ಚರ್ಚಿಸುವ ಇವರು, ಎಲ್ಲ ರೀತಿಯಿಂದಲೂ ಟೊಬ್ಯಾಕೊ ಬಳಕೆ ತಡೆಗೆ ಪ್ರಯತ್ನಿಸುತ್ತಿದ್ದಾರೆ. “Learn from yesterday, live for today, and hope for tomorrow!” ಇದು ನಳಿನಿ ಅವರ ನೀತಿ. ದುಶ್ಚಟಗಳಿಂದ ದೂರವಾಗಲು ಇವರು ಮಾದರಿಯಾದರೆ ಸಾಕು. ಆತ್ಮವಿಶ್ವಾಸದ ಪ್ರತೀಕವೂ ಆಗಿರುವುದು ನಳಿನಿ ಸತ್ಯನಾರಾಯಣ ಅವರ ವೈಶಿಷ್ಟ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.