ಚೆನ್ನೈ: ಮಹಾ ಶಿವರಾತ್ರಿಯಂದು ‘ಆದಿಯೋಗಿ’ ಅಥವಾ ಶಿವನ ಮುಖವಿರುವ 112 ಅಡಿ ಎತ್ತರದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24ರಂದು ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಅನಾವರಣಗೊಳಿಸಲಿದ್ದಾರೆ.
ಶಿವನ ಮುಖವಿರುವ ಈ ಸಾಂಪ್ರದಾಯಿಕ ವಿಗ್ರಹ ವಿಮೋಚನೆಯ ಸಂಕೇತವಾಗಿದ್ದು, ಯೋಗ ವಿಜ್ಞಾನದ ಮೂಲಕ 112 ರೀತಿಯಲ್ಲಿ ಅಂತಿಮ ಮೋಕ್ಷವನ್ನು ಪಡೆಯುವುದನ್ನು ಪ್ರತಿನಿಧಿಸುತ್ತದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಶಿವನ ಮುಖವಿರುವ ವಿಗ್ರಹವಾಗಿರಲಿದೆ ಎಂದು ಇಶಾ ಫೌಂಡೇಶನ್ನ ಪ್ರಕಟಣೆ ತಿಳಿಸಿದೆ.
ಫೆ.24ರ ಮಹಾಶಿವರಾತ್ರಿಯಂದು ಪ್ರಧಾನಿ ಮೋದಿ ಅವರು ‘ಮಹಾ ಯೋಗ ಯಜ್ಞ’ವನ್ನು ಪ್ರಾರಂಭಿಸಲು ಪವಿತ್ರ ಅಗ್ನಿಯನ್ನು ಉರಿಸಲಿದ್ದಾರೆ. ಈ ಸಂದರ್ಭ ವಿಶ್ವದಾದ್ಯಂತ ಜನರು ಕನಿಷ್ಠ 100 ಮಂದಿಗೆ ಸರಳ ಯೋಗವನ್ನು ಕಲಿಸಲು ಪ್ರಮಾಣ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.