ನಾರ್ಕಂಡ: ಹಿಮಾಚಲ ಪ್ರದೇಶದ ನಾರ್ಕಂಡ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಚಳಿಗಾಲದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಪ್ರವಾಸಿಗರಿಗೆ ಸ್ಕೀಯಿಂಗ್ ತರಬೇತಿ ಕೋರ್ಸ್ಗಳನ್ನು ಆರಂಭಿಸಿದ್ದಾರೆ.
ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಚ್ಪಿಟಿಡಿಸಿ) ವೃತ್ತಿಪರ ಹಾಗೂ ಉಚಿತ ಎರಡೂ ಪ್ರಕಾರದ ಸ್ಕೀಯಿಂಗ್ ತರಬೇತಿ ಕೋರ್ಸ್ಗಳನ್ನು ರೂಪಿಸಿದೆ.
ಶಿಮ್ಲಾದಿಂದ 65 ಕಿ.ಮೀ. ದೂರ ಹಾಗೂ ಸಮುದ್ರ ಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ನಾರ್ಕಂಡ ಒಂದು ಪ್ರಮುಖ ಸ್ನೋ ಸ್ಕೀಯಿಂಗ್ ತಾಣವಾಗಿದೆ. ಪ್ರವಾಸಿಗರು ಮತ್ತು ವೃತ್ತಿಪರ ತರಬೇತುದಾರರನ್ನು ಆಕರ್ಷಿಸಲು ಎಚ್ಪಿಟಿಡಿಸಿ ಹಲವು ಸ್ಕೀಯಿಂಗ್ ಕೋರ್ಸ್ಗಳನ್ನು ಆರಂಭಿಸಿದೆ. ಈ ಕೋರ್ಸ್ಗಳು 3 ದಿನಗಳ ತರಬೇತಿ ಕೋರ್ಸ್ಗಳಿಂದ ಆರಂಭಗೊಂಡು 14 ದಿನಗಳ ವೃತ್ತಿಪರ ಮೂಲಭೂತ ತರಬೇತಿ ಕೋರ್ಸ್ಗಳು ನಡೆಯಲಿವೆ ಎಂದು ಆಯೋಜಕ ಹಾಗೂ ತರಬೇತುದಾರ ಜಸಂಪಾ ನೇಗಿ ಹೇಳಿದ್ದಾರೆ.
ಕಳೆದ 4 ದನಗಳಲ್ಲಿ 21 ವಿದ್ಯಾರ್ಥಿಗಳ ತಂಡಕ್ಕೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.