ನವದೆಹಲಿ: 2014 ರಲ್ಲಿ ಮಂಗಳನ ಅಂಗಳಕ್ಕೆ ಚಲಿಸಿದ ಮಾಮ್ (ಮಾರ್ಸ್ ಅರ್ಬಿಟರ್ ಮಿಷನ್) ನ ಯಶಸ್ಸಿನ ಹಿಂದಿದ್ದ ಇಸ್ರೋದ ಮೂವರು ಮಹಿಳೆಯರ ಕುರಿತು ಕಿರುಚಿತ್ರವೊಂದನ್ನು ತಯಾರಿಸಲಾಗಿದೆ. ಆ ಮೂವರ ಕನಸುಗಳ ಜಾಡು ಹಿಡಿದು ಹೊರಡುವುದೇ ಚಿತ್ರದ ಜೀವಾಳ.
ಪ್ರಪಂಚದಲ್ಲೇ ಮೊದಲ ಪ್ರಯತ್ನದಲ್ಲೇ ಮಂಗಳನ ಕಕ್ಷೆಗೆ ಮಾಮ್ ಬಿಡುವಲ್ಲಿ ಯಶಸ್ವಿಯಾಗಿದ್ದು ಭಾರತ ಮಾತ್ರ. ಅದರ ಯಶಸ್ಸಿನ ಕ್ಷಣದಲ್ಲೇ ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳು ಹಾಗೂ ಎಂಜಿಯರ್ಗಳು ಶಿಷ್ಟಾಚಾರವನ್ನೂ ಬದಿಗೊತ್ತಿ ಸಂಭ್ರಮಿಸಿದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರವೊಂದು 2014 ರಲ್ಲಿ ವೈರಲ್ ಆಗಿತ್ತು. ಅಲ್ಲದೇ ಆ ಸಾಧನೆಯ ಫೋಟೊ ಕಿರುಚಿತ್ರ ನಿರ್ಮಾಣವೊಂದಕ್ಕೆ ಪ್ರೇರಣೆಯೂ ಆಗಿತ್ತು. ಎಮಿಲಿ ವಿ.ಡ್ರಿಸ್ಕೋಲ್ ಎಂಬಾಕೆ 2016 ರಲ್ಲಿ ಕಿರುಚಿತ್ರವನ್ನು ಬಿಡುಗಡೆಯನ್ನೂ ಮಾಡಿದರು.
ಇಸ್ರೋದ ನಂದಿನಿ ಹರಿನಾಥ್, ಸೀತಾ ಶ್ಯಾಮಸುಂದರಮ್ ಹಾಗೂ ಮಿನಲ್ ರೋಹಿತ್ ಎಂಬ ಮೂವರು ಮಹಿಳೆಯರು ಮಂಗಳಯಾನದ ಯಶಸ್ಸಿನಗಾಥೆಯನ್ನು ಕಿರುಚಿತ್ರದಲ್ಲಿ ವಿವರಿಸಿದ್ದಾರೆ.
ಇದೀಗ ಫೆ.15 ರಂದು ಇಸ್ರೋ ಏಕಕಾಲಕ್ಕೆ ಒಂದೇ ರಾಕೆಟ್ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ವಿಶ್ವದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.