ನವದೆಹಲಿ: ನಿವೃತ್ತ ನೌಕರರು ತಮ್ಮ ಪಿಂಚಣಿ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮೂಲಕ ಡಿಜಿಟಲ್ ಲೈಫ್ ಪತ್ರ ಸಲ್ಲಿಸಲು ನಿವೃತ್ತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.
ಕಳೆದ ಜನವರಿಯಲ್ಲಿ ನಿವೃತ್ತ ನೌಕರರ ಭವಿಷ್ಯ ನಿಧಿ ಸಂಸ್ಥೆ ಜೀವನ್ ಪ್ರಮಾಣ ಪತ್ರ ಯೋಜನೆ ಮೂಲಕ ಆಧಾರ್ ಸಂಖ್ಯೆ ಸಲ್ಲಿಸಲು ಫೆ. 28ರ ವರೆಗೆ ಸಮಯ ವಿಸ್ತರಿಸಿತ್ತು.
ಪಿಂಚಣಿದಾರರು ಡಿಜಿಟಲ್ ಲೈಫ್ ಪತ್ರ ಸಲ್ಲಿಸಲು ಮಾರ್ಚ್ 31ರ ವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಪಿಎಫ್ಒ ನೌಕರರ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನಿವೃತ್ತ ನೌಕರರು ಹಾಗೂ ಅರ್ಜಿದಾರರಿಗೆ ಆಧಾರ್ ಸಲ್ಲಿಕೆ ಕಡ್ಡಾಯಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.