ಬೀಜಿಂಗ್: ಉಗ್ರ ಮಸೂದ್ ಅಜರ್ಗೆ ನಿಷೇಧ ಹೇರುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತ ಹಾಗೂ ಚೀನಾ ಫೆ.22 ರಂದು ಪರಸ್ಪರ ಚರ್ಚಿಸಲಿವೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದು, ಚೀನಾದ ವಿದೇಶಾಂಗ ಅಧಿಕಾರಿ ಝಂಗ್ ಯೆಸೋಯಿ ಚೀನಾವನ್ನು ಪ್ರತಿನಿಧಿಸಲಿದ್ದಾರೆ.
ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದು, ಉಭಯ ದೇಶಗಳ ಜವಾಬ್ದಾರಿಗೆ ಸಂಬಂಧಿಸಂತೆಯೂ ಚಿಂತನೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ, ಗೆಂಗ್ ಶುವಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉಗ್ರ ಮಸೂದ್ ಅಜರ್ಗೆ ಹೇರಬೇಕೆಂದಿರುವ ನಿಷೇಧ ಹಾಗೂ ಎನ್ಎಸ್ಜಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಕುರಿತಾಗಿರುವ ಉಭಯ ದೇಶಗಳ ಮಧ್ಯದ ಸಂಘರ್ಷಗಳು ವಿಭಿನ್ನವಾಗಿರುವುದು ಸಹಜ ಎಂದು ಅವರು ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಸಂಘರ್ಷಗಳನ್ನು ಕಡಿಮೆಗೊಳಿಸಿಕೊಳ್ಳುವುದು ಹಾಗೂ ಪರಸ್ಪರ ಸಹಕಾರ ತತ್ವವನ್ನು ವೃದ್ಧಿಸುವುದೇ ಈ ಸಂವಾದದ ಮೂಲ ಧ್ಯೇಯ ಎಂದು ತಿಳಿಸಿರುವ ಅವರು, ಅಜರ್ ಮಸೂದ್ಗೆ ನಿಷೇಧ ಹೇರುವ ಕುರಿತು ಬಲವಾದ ಸಾಕ್ಷ್ಯವನ್ನು ಕೇಳುತ್ತಿದ್ದೇವೆ ಅಷ್ಟೇ ಎಂದು ಪುನರುಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.