ಹೈದರಾಬಾದ್: ಜನರಿಗಿಂತ ವಾಹನಗಳೇ ತುಂಬಿರುವ ಬ್ಯುಸಿ ರಸ್ತೆಗಳನ್ನು ದಾಟುವುದೇ ಸವಾಲು. ಅದರಲ್ಲೂ ಮಕ್ಕಳು ಹಾಗೂ ಹಿರಿಯರ ಪಾಡಂತೂ ಹೇಳತೀರದು. ಆದರೆ ಲಡ್ಡುಭಾಯ್ ಮಾತ್ರ ಇಂಥವರಿಗೆ ರಸ್ತೆ ದಾಟಲು ಸಹಾಯ ಮಾಡುವುದರಲ್ಲೇ ಖುಷಿ ಕಂಡಿದ್ದು ವಿಶಿಷ್ಟ.
ಹೌದು. ಡೆಕ್ಕನ್ ಕ್ರೊನಿಕಲ್ ಈ ಕುರಿತು ವರದಿ ಮಾಡಿದ್ದು, ಹೈದರಾಬಾದ್ನಲ್ಲಿದ್ದಾನಂತೆ ಎಲ್ಲರ ಪ್ರೀತಿಯ ಲಡ್ಡುಭಾಯ್. ಅಲ್ಲಿನ ಮೀರ್ ಚೌಕ್ಗೆ ಹೋದರೆ ಅವನು ಸಿಗುತ್ತಾನಂತೆ. 55 ವರ್ಷದ ಲಡ್ಡುಭಾಯ್ ಮೂಲ ಹೆಸರು ಕ್ರಿಸ್ಟೋಫರ್.
ಕಳೆದ 35 ವರ್ಷಗಳಿಂದ ಈ ಸೇವೆಯಲ್ಲಿ ಲಡ್ಡುಭಾಯ್ ನಿರತನಾಗಿದ್ದಾನೆ. ಮನೆಯ ಸಮೀಪವೇ ಇರುವ ಫ್ಲೋರೆಸ್ಟ್ ಶಾಲೆ ಬಳಿ ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಹಾಜರಾಗುವ ಈತ, ಮಕ್ಕಳನ್ನು ಟ್ರಾಫಿಕ್ನಿಂದ ತುಂಬಿರುವ ರಸ್ತೆಯನ್ನು ದಾಟಿಸುವಲ್ಲಿ ಸಹಾಯ ಮಾಡುತ್ತಾನೆ. ಮತ್ತೆ ಸಂಜೆ 4 ಗಂಟೆಗೆ ಶಾಲೆ ಬಳಿ ಬರುವ ಲಡ್ಡುಭಾಯ್, ಮಕ್ಕಳು ಸುರಕ್ಷಿತವಾಗಿ ಮನೆ ತಲುಪಲು ಸಹಕರಿಸುತ್ತಾನಂತೆ.
ಅವನ ಈ ಅಪರೂಪದ ಸೇವೆಯನ್ನು ಸಂಚಾರಿ ಪೊಲೀಸರು ಹಾಗೂ ಜನರೂ ಇಷ್ಟಪಟ್ಟಿದ್ದಾರೆ. ಆದರೆ ತನ್ನ ಸೇವೆಗೆ ಪ್ರತಿಯಾಗಿ ಅವನು ಏನನ್ನೂ ಬಯಸುವುದಿಲ್ಲ. ಅದು ಅವನಿಗೆ ಸಂತೋಷ ನೀಡುವ ಕೆಲಸಗಳಲ್ಲಿ ಒಂದಂತೆ.
ನಾಲ್ಕು ಮಳಿಗೆಗಳನ್ನು ಬಾಡಿಗೆ ಕೊಟ್ಟಿದ್ದು, ಅದರಿಂದ ತಿಂಗಳಿಗೆ 12 ಸಾವಿರ ರೂಪಾಯಿ ಬರುತ್ತದೆ. ನನ್ನ ಬದುಕಿಗೆ ಅಷ್ಟು ಸಾಕು. ಅದರಿಂದ ನನಗೆ ನೆಮ್ಮದಿ ಇದೆ. ಸಂತೋಷದ ಸಂಗತಿ ಎಂದರೆ ನಾನು ರಸ್ತೆ ದಾಟಿಸುವುದಕ್ಕೆ ಪ್ರತಿಯಾಗಿ ಮಕ್ಕಳು ಚಾಕಲೇಟ್ ಹಾಗೂ ಸ್ವೀಟ್ ಕೊಡಲು ಬರುತ್ತಾರೆ. ಆದರೆ ನಾನು ಯಾರಿಂದಲೂ ಏನು ಪಡೆಯುವುದಿಲ್ಲ ಎನ್ನುತ್ತಾರಂತೆ ಲಡ್ಡುಭಾಯ್.
ಮೀರ್ಚೌಕ್ನಲ್ಲಿ ಲಡ್ಡುಭಾಯ್ ಚಿರಪರಿಚಿತ ಹಾಗೂ ಪಾದಚಾರಿಗಳೆಲ್ಲರೂ ಇಷ್ಟಪಡುವ ವ್ಯಕ್ತಿ. ಮೀರ್ ಚೌಕ್ ಸಂಚಾರಿ ಪೊಲೀಸ್ ಠಾಣೆವತಿಯಿಂದ ಬಹುಮಾನ ನೀಡಿ ಗೌರವಿಸಲಾಗಿದೆ. ಒಂದು ವಿಶಲ್ ಹಾಗೂ ಮಾಸ್ಕ್ ಕೂಡಾ ನೀಡಿದ್ದು, ರಸ್ತೆ ಸುರಕ್ಷತೆಯಲ್ಲಿ ಲಡ್ಡುಭಾಯ್ ಕಾರ್ಯ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.