ಬಿಎ ಕೋರ್ಸ್ನ ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಕ್ತಿ ಘಾಟೋಲೆ ನಾಗ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದಿರುವುದು ಆಕೆಯ ಕುಟುಂಬಕ್ಕೆ ಹೆಮ್ಮೆಯ ವಿಚಾರ.
ರೆಟಿನೋಬ್ಲಾಸ್ಟೋಮಾ ಎಂಬ ಕಣ್ಣಿನ ಕ್ಯಾನ್ಸರ್ನಿಂದ ತನ್ನ 9ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡ ಭಕ್ತಿ ಘಾಟೋಲೆ ಅವರು ಐಎಎಸ್ ಪದವಿ ಪಡೆಯುವ ಮಹತ್ವಾಕಾಂಕ್ಷಿ ಕನಸು ನನಸಾಗಿಸುವಲ್ಲಿ ಎದೆಗುಂದಲಿಲ್ಲ.
ಜೀವನದಲ್ಲಿ ಸುದೀರ್ಘ ಪ್ರಯತ್ನದ ಬಳಿಕ ಭಕ್ತಿ ಈ ಸಾಧನೆ ಮಾಡಿದ್ದಾರೆ. ಆದರೆ 21 ವರ್ಷದ ಭಕ್ತಿ ಘಾಟೋಲೆ ಮನಶ್ಯಾಸ್ತ್ರತಜ್ಞ ಆಗುವ ಗುರಿ ಹೊಂದಿದ್ದಾರೆ. ತದನಂತರ ಐಎಎಸ್ ಅಧಿಕಾರಿಯಾಗಿ ಮುಂದುವರೆಯುವ ಆಕಾಂಕ್ಷೆ ಇವರದ್ದಾಗಿದೆ.
ಆರು ತಿಂಗಳ ಎಳೆಯ ವಯಸ್ಸಿನಲ್ಲೇ ವೈದ್ಯರು ಭಕ್ತಿಯ ಬಲಗಣ್ಣಿನಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದ್ದರೂ ಅನೇಕ ಪ್ರಯತ್ನಗಳ ಹೊರತಾಗಿ ಕಣ್ಣನ್ನು ಉಳಿಸುವ ವೈದ್ಯರ ಪ್ರಯತ್ನ ವಿಫಲವಾಗಿತ್ತು. ಈ ರೋಗ ಕ್ರಮೇಣ ಎರಡೂ ಕಣ್ಣಿಗೆ ಹರಡಿದ್ದು, ಭಕ್ತಿ ತಮ್ಮ ಎರಡೂ ಕಣ್ಣನ್ನು ಕಳೆದುಕೊಂಡಿದ್ದರು.
ಭಕ್ತಿಯ ಚಿಕಿತ್ಸೆಗೆ ಪೋಷರು ಪರದಾಡಿದಕ್ಕೆ ಲೆಕ್ಕವಿಲ್ಲ್ಲ. ನಾಗ್ಪುರದಿಂದ ಹೈದರಾಬಾದ್, ಚೆನ್ನೈಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ೨೫ ಕಿಮೋಥೆರಪಿ ಕೂಡ ನಡೆದಿದೆ. ಕೊನೆಗೂ ಭಕ್ತಿ ತನ್ನ ಎಡ ಕಣ್ಣನ್ನೂ ಕಳೆದುಕೊಂಡರು. ಆದರೆ ಈ ಎಲ್ಲದರ ನಡುವೆ ಭಕ್ತಿ ನಾಗ್ಪುರದ ಯೋಗ ಅಭ್ಯಾಸ ಮಂಡಲದಿಂದ ಯೋಗವನ್ನು ಕಲಿತರು. ಅವರು ಬ್ರೈಲಿ ಭಾಷೆಯನ್ನೂ ಕಲಿತರು.
10ನೇ ತರಗತಿಯ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ.94 ಅಂಕಗಳೊಂದಿಗೆ ಟಾಪರ್ ಆಗಿ ಹೊರಹೊಮ್ಮಿದರು. ಭಕ್ತಿ ಘಾಟೋಲೆ 12ನೇ ತರಗತಿಯಲ್ಲಿ ಶೇ.88 ಅಂಕದೊಂದಿಗೆ ನಾಗ್ಪುರದಲ್ಲೇ ದ್ವಿತೀಯ ಸ್ಥಾನ ಪಡೆದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.