ನವದೆಹಲಿ: ಡಿಸೆಂಬರ್ 17, 1928ರಂದು ಬ್ರಿಟಿಷ್ ಅಧಿಕಾರಿ ಜಾನ್ ಸಾಂಡರ್ಸ್ ಅವರನ್ನು ಹತ್ಯೆಗೈಯಲು ಭಗತ್ ಸಿಂಗ್ ಬಳಸಿದ ಬಂದೂಕು 90 ವರ್ಷಗಳ ಬಳಿಕ ಪತ್ತೆಯಾಗಿದೆ.
ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣವಾಗಿದ್ದ ಸಾಂಡರ್ಸ್ನನ್ನು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಈ ಬಂದೂಕಿನಿಂದ ಶೂಟ್ ಮಾಡಿದ್ದರು ಎಂದು ಮಾಧ್ಯಮ ವರದಿ ತಿಳಿಸಿದೆ.
32mm ಕೋಲ್ಟ್ ಸ್ವಯಂಚಾಲಿತ ಪಿಸ್ತೂಲ್ ಗಡಿ ಭದ್ರತಾ ಪಡೆ (ಬಿಎಸ್ಎಫ್)ನ ಕೇಂದ್ರ ಶಸ್ತ್ರಾಸ್ತ್ರ ಮತ್ತು ತಂತ್ರಗಳ ಶಾಲೆ (ಸಿಎಸ್ಡಬ್ಲ್ಯೂಟಿ)ಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.ಆದರೆ ಈ ಪಿಸ್ತೂಲ್ ಭಗತ್ ಸಿಂಗ್ಗೆ ಸೇರಿದ್ದು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಇದನ್ನು ಬಿಎಸ್ಎಫ್ನ ಇಂಡೋರ್ ವಸ್ತುಸಂಗ್ರಹಾಲಯದಲ್ಲಿ ಮೊದಲ ಬಾರಿ ಪ್ರದರ್ಶಿಸಲಾಯಿತು ಎಂದು ಆಂಗ್ಲ ಮಾಧ್ಯವೊಂದು ವರದಿ ಮಾಡಿದೆ.
ಈ ಪಿಸ್ತೂಲ್ ಮೇಲಿದ್ದ ಕಪ್ಪು ಪೇಂಟ್ ತೆಗೆಯಲಾಗಿದ್ದು, ಈ ಸಂದರ್ಭ ಅದರ ಮೇಲೆ ನಮೂದಿಸಲಾಗಿದ್ದ ಕ್ರಮಸಂಖ್ಯೆ (168896) ನಮ್ಮಲ್ಲಿರುವ ದಾಖಲೆಗಳೊಂದಿಗೆ ಹೋಲುತ್ತಿದ್ದು, ಇದು ಭಗತ್ ಸಿಂಗ್ ಅವರ ಪಿಸ್ತೂಲ್ ಎಂದು ಸಿಎಸ್ಡಬ್ಲ್ಯೂಟಿ ಮ್ಯೂಸಿಯಂನ ಮೇಲ್ವಿಚಾರಕ ವಿಜೇಂದ್ರ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.