ಬೆಳಗಾವಿ: ನಾನು ಬೆಳಗಾವಿಯವನು, ಬೆಳಗಾವಿ ಮಹಾರಾಷ್ಟ್ರದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸುವಂತೆ ಬರೆದಿರುವ ಟೀಶರ್ಟ್ಗಳನ್ನು ಧರಿಸಿದ ಎಂಇಎಸ್ ಕಾರ್ಯಕರ್ತರು ಪರೋಕ್ಷವಾಗಿ ಗಡಿ ಕ್ಯಾತೆಯನ್ನು ತೆಗೆದಿದ್ದಾರೆ ಎಂದೇ ಹೇಳಬಹುದು.
ಮೀಸಲಾತಿಗೆ ಸಂಬಂಧಿಸಿದಂತೆ ನಗರದಲ್ಲಿ ಆಯೋಜಿಸಿದ್ದ ಮರಾಠಾ ಮೌನ ಕ್ರಾಂತಿ ಮೋರ್ಚಾದ ವತಿಯಿಂದ ಇಂದು ಜಾಥಾ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮರಾಠಿಯ 5 ಮಂದಿ ಹೆಣ್ಣು ಮಕ್ಕಳಿಂದ ಭಾಷಣ ಮಾಡಿಸಿ, ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.
ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ, ಕೋಪರ್ಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ, ಎಸ್ಸಿ, ಎಸ್ಟಿ (ಪ್ರಿವೆನ್ಶನ್ ಆಫ್ ಆಟ್ರಾಸಿಟೀಸ್) ಆಕ್ಟ್-1989 ಕ್ಕೆ ತಿದ್ದುಪಡಿ, ಗಡಿ ಸಮಸ್ಯೆಗೆ ಪರಿಹಾರ ಹೀಗೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ.
ಮರಾಠ ಮೌನ ಮೋರ್ಚಾದಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಶಾಸಕ ಅರವಿಂದ ಪಾಟೀಲ್, ಸಂಭಾಜಿ ಪಾಟೀಲ್, ಮೇಯರ್ ಸರಿತಾ ಪಾಟೀಲ್, ಕೊಲ್ಲಾಪುರ ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಇತರರ ಎದುರೇ ಗಡಿ ವಿಚಾರ ಪ್ರಸ್ತಾಪಿಸಲಾಗಿದೆ.
ಈ ಜಾಥಾಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲೇ ಕೆಲವು ನಿರ್ಬಂಧಗಳನ್ನು ಹೇರಿದ್ದು, ಮರಾಠಾ ಮೌನ ಮೋರ್ಚಾ ಉಲ್ಲಂಘಿಸಿದೆ. ಪೊಲೀಸ್ ಇಲಾಖೆ ಈ ಕುರಿತು ಏನು ಕ್ರಮ ಕೈಗೊಳ್ಳತ್ತದೋ ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.