ನವದೆಹಲಿ: ಇ-ವೀಸಾದೊಂದಿಗೆ ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಪ್ರೀ-ಲೋಡೆಡ್ ಉಚಿತ ಸಿಮ್ ಕಾರ್ಡ್ ಪಡೆಯಲಿದ್ದಾರೆ.
ಬಿಎಸ್ಎನ್ಎಲ್ ಈ ಸಿಮ್ಗಳನ್ನು ಒದಗಿಸಲಿದ್ದು, ಈ ಸಿಮ್ಗಳು 50 ರೂ. ಟಾಕ್ಟೈಮ್, 50 MB ಡಾಟಾವನ್ನು ಉಚಿತವಾಗಿ ಹೊಂದಲಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಈ ಸೇವೆಗೆ ಚಾಲನೆ ನೀಡಿದ್ದಾರೆ.
ಆರಂಭದಲ್ಲಿ ಈ ಸೇವೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯವಿರಲಿದ್ದು, ನಂತರ ಉಳಿದ 15 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು.
30 ದಿನಗಳ ವ್ಯಾಲಿಡಿಟಿಯ ಈ ಸಿಮ್, ಪ್ರಯಾಣಿಕರು ದಿನದ 24 ತಾಸು ಪ್ರವಾಸಿ ಸಹಾಯವಾಣಿಗೆ ಕರೆ ಮಾಡಲು ಸಹಾಯವಾಗಲಿದ್ದು, ಇದು ಜರ್ಮನ್, ರಷ್ಯನ್, ಹಾಗೂ ಜಪಾನಿ ಭಾಷೆಗಳು ಸೇರಿ 12 ಭಾಷೆಗಳಲ್ಲಿ ಲಭ್ಯವಿರಲಿದೆ.
ಇ-ವೀಸಾದೊಂದಿಗೆ ಭಾರತಕ್ಕೆ ಆಗಮಿಸುವ ಪ್ರವಾಸಿಗರು ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಲ್ಕಮ್ ಕಿಟ್ನ ಭಾಗವಾಗಿ ಈ ಸಿಮ್ಗಳನ್ನು ವಿಮಾನ ನಿಲ್ದಾಣದ ಕೌಂಟರ್ಗಳಲ್ಲಿ ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.