ಮಂಗಳೂರು : ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಶುಲ್ಕ ಪಾವತಿಸಿದಲ್ಲಿ, ವಿದ್ಯಾರ್ಥಿಗಳಿಂದ ಮಾಹಿತಿ ಸಲ್ಲಿಸುವಾಗ ತಪ್ಪಾದಲ್ಲಿ ದಂಡ ವಿಧಿಸುವ ವಿಶ್ವವಿದ್ಯಾಲಯ, ವಿ.ವಿಯು ಕೂಡ ಪರೀಕ್ಷಾ ಫಲಿತಾಂಶ ನೀಡಲು, ಅಂಕಪಟ್ಟಿಯಲ್ಲಿ ತಪ್ಪು ಮತ್ತು ವಿಳಂಬದ ನೀತಿಯಿಂದ ತೊಂದರೆಯಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸಿದ್ಧವಿದೆಯೇ? ಎಂದು ಮಂಗಳೂರು ವಿ.ವಿ ಮಾಜಿ ಸಿಂಡಿಕೇಟ್ ಸದಸ್ಯ ರವಿಚಂದ್ರ ಪಿ.ಎಂ. ಇವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳೇ ಇನ್ನೆಷ್ಟು ದಿನ ಸುಳ್ಳಿನ ಕಥೆಗಳನ್ನು ಕಟ್ಟುತ್ತೀರಿ? ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ನೀವು ಪ್ರಕಟಿಸಿದ ಪರೀಕ್ಷಾ ಫಲಿತಾಂಶದ ಅವ್ಯವಸ್ಥೆಯನ್ನು ಸರಿ ಮಾಡಲು ಇನ್ನು 3 ವರ್ಷ ಬೇಕಾದೀತು. ವಿಶ್ವ ವಿದ್ಯಾಲಯದ ಘನತೆಗೆ ಮಸಿ ಬಳೆದವರು ನೀವು ಮತ್ತು ನಿಮ್ಮ ತಂಡದವರೇ ಹೊರತು, ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ಬಯಳಿಗೆಳೆದ ವಿದ್ಯಾರ್ಥಿ ಸಂಘಟನೆಗಳಲ್ಲ. ಲೆಟರ್ಹೆಡ್ ಸಂಘಟನೆಯವರ ಕೈಯಿಂದ ನೀವು ಅಭಿನಂದನೆ ಸ್ವೀಕರಿಸಿದ ಕೂಡಲೇ ಸಮಸ್ಯೆಯಿಂದ ಜಾರಿಕೊಳ್ಳಲು ಸಾಧ್ಯವಿಲ್ಲ. ವಿ.ವಿಯ ವೆಬ್ಸೈಟ್ ಹ್ಯಾಕ್ ಆಗಿಲ್ಲ ಎನ್ನುವ ನಿಮಗೆ ಅನಧಿಕೃತವಾಗಿ ಫಲಿತಾಂಶ ಹೇಗೆ ಪ್ರಕಟವಾಯಿತು ಎಂಬುವುದಕ್ಕೆ ಉತ್ತರ ಇಲ್ಲ. ಫಲಿತಾಂಶದಲ್ಲಿ ಗೊಂದಲ ಇಲ್ಲ ಎನ್ನುವ ನೀವು ಗೊಂದಲ ನಿವಾರಣೆಗೆ ಹೆಲ್ಪ್ಡೆಸ್ಕ್ ಆರಂಭಿಸಿದ್ದೀರಿ. ವಿಶ್ವವಿದ್ಯಾಲಯ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೆ ಕ್ಷಮಿಸಬಹುದಿತ್ತು ಅದು ಬಿಟ್ಟು ತನ್ನ ಎಡಬಿಡಂಗಿತನವನ್ನು ಸಮರ್ಥಿಸಿಕೊಂಡಿದ್ದು ದುರಂತ ಮತ್ತು ಮಾಜಿ ಸಿಂಡಿಕೇಟ್ ಸದಸ್ಯನಾಗಿ ಇದನ್ನು ನಾನು ಖಂಡಿಸುತ್ತೇನೆ.
ಈಗಲಾದರೂ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸಿಕೊಳ್ಳಿ. ಜವಾಬ್ದಾರಿಯಿಂದ ಕೆಲಸ ಮಾಡಿ. ಈಗಾಗಲೇ ಎಬಿವಿಪಿಯು ರಾಜ್ಯಪಾಲರಿಗೆ ವಿಷಯ ಮನವರಿಕೆ ಮಾಡಿದೆ, ಇಂದಲ್ಲ ನಾಳೆ ವಿ.ವಿಯು ಉತ್ತರಿಸಲೇ ಬೇಕು. ವಿದ್ಯಾರ್ಥಿ ಹೋರಾಟವು ಪ್ರಾರಂಭವಾಗಿದೆ, ವಿ.ವಿಯು ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಬಗ್ಗೆ ಯೋಚಿಸುವ ಬದಲು ಮತ್ತು ರಾಜಕೀಯ ರೀತಿಯಲ್ಲಿ ಪತ್ರಿಕೆ ಹೇಳಿಕೆ ನೀಡುವ ಬದಲು ಕರ್ತವ್ಯದ ಬಗ್ಗೆ ಯೋಚಿಸಿ.
ನಾವೆಲ್ಲಾ ಓದಿದ ವಿಶ್ವವಿದ್ಯಾಲಯದ ಅಧ:ಪಥನವನ್ನು ತಡೆಯಲು ನಾವು ಸಿದ್ಧರಿದ್ದೇವೆ. ಪ್ರಜಾಸತಾತ್ಮಕವಾಗಿ ನಡೆದ ಹೋರಾಟವನ್ನು ಗೌರವಿಸಿ. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಣ ತಜ್ಞರು, ಪೋಷಕರು ಸೇರಿದಂತೆ ಹೋರಾಟಕ್ಕೆ ಇಳಿಯುತ್ತೇವೆ. ಮುಂದಾಗುವ ಪರಿಣಾಮಕ್ಕೆ ವಿಶ್ವವಿದ್ಯಾಲಯವೇ ಹೊಣೆಗಾರಿಕೆಯಾಗಿರುತ್ತದೆ ಎಂದು ಮಂಗಳೂರು ವಿ.ವಿ ಮಾಜಿ ಸಿಂಡಿಕೇಟ್ ಸದಸ್ಯ ರವಿಚಂದ್ರ ಪಿ.ಎಂ. ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.