ಇಂಫಾಲ್: ಮಣಿಪುರದ ಅತಿ ದೊಡ್ಡ ಸಿಹಿನೀರಿನ ಸರೋವರ ಲೊಕ್ತಾಕ್ ಸರೋವರ ದೇಶದ ಪ್ರಥಮ ತೇಲುವ ಪ್ರಾಥಮಿಕ ಶಾಲೆ (floating elementary School)ಗೆ ಆಶ್ರವಾಗಿದೆ.
ಮಣಿಪುರ ರಾಜಧಾನಿ ಇಂಫಾಲ್ನಿಂದ 50 ಕಿ.ಮೀ. ದೂರದ ಚಂಪು ಖಂಗ್ಪೋಕ್ ಗ್ರಾಮದ ಲಂಗೋಲ್ಸಂಬಿ ಲೀಕೈ ಎಂಬಲ್ಲಿ ತೇಲುವ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಲಾಗಿದೆ.
ಇತ್ತೀಚೆಗೆ ಇಲ್ಲಿ ಸ್ಪಾಂಜಿನಂತಹ ಸಾಸರ್ ಆಕಾರದ ಸಸ್ಯ ಮತ್ತು ಮಣ್ಣಿನ ದೊಡ್ಡ ತುಂಡುಗಳಾದ ಫುಂದಿಗಳನ್ನು ಸ್ಥಳಾಂತರಿಸಲಾಗಿದ್ದು, ಇವು ಯಾವಾಗಲೂ ನೀರಿನಲ್ಲಿಮುಳಿಗಿರುತ್ತವೆ. ಇವು ದೊಡ್ಡ ಗಾತ್ರದಲ್ಲಿದ್ದು, ನೀರಿನಲ್ಲಿ ಚಲಿಸುತ್ತಿರುತ್ತದೆ.
ಅರ್ಧದಲ್ಲಿ ಶಾಲೆ ಬಿಟ್ಟ ಹಾಗೂ ನಿರಾಶ್ರಿತರ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ ತೇಲುವ ಪ್ರಾಥಮಿಕ ಶಾಲೆ ಸ್ಥಾಪಿಸಲಾಗಿದೆ.
ಲೊಕ್ತಾಕ್ ನದಿಯನ್ನು ‘ಮಣಿಪುರದ ಜೀವಸೆಲೆ’ ಎಂದು ಉಲ್ಲೇಖಿಸಲಾಗಿದ್ದು, ಹೆಚ್ಚಿನ ಉತ್ಪತ್ತಿ ನೀಡುವ ಸರೋವರವಾಗಿದೆ. ಹಲವಾರು ಜೀವಗಳು ತಮ್ಮ ಜೀವನಕ್ಕಾಗಿ ಇದರ ಮೇಲೆ ಅವಲಂಬಿತವಾಗಿವೆ. ಮಣಿಪುರದ ಆರ್ಥಿಕತೆಯಲ್ಲಿ ಈ ಸರೋವರ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದನ್ನು ವಿದ್ಯುತ್ ಉತ್ಪಾದನೆ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.