ಭೂಪಾಲ್: ಫೆ.14 ರಂದು ಪ್ರೇಮಿಗಳ ದಿನಾಚರಣೆ ಬದಲು ಮಾತೃ ಪಿತೃ ದಿನಾಚರಣೆ ಆಚರಿಸುವಂತೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲಾಧಿಕಾರಿ ಜೆ.ಕೆ.ಜೈನ್ ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೂ ಈ ಸುತ್ತೋಲೆ ಹೊರಡಿಸಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುವ ಮಾತೃ ಪಿತೃ ದಿನಾಚರಣೆಗೆ ಪ್ರೋತ್ಸಾಹ ನೀಡುವಂತೆ ಅದರಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಮನೆಗಳು, ಸಂಸ್ಥೆಗಳಲ್ಲಿ ಫೆ.14 ರಂದು ಮಾತೃ ಪಿತೃ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ, ಯುವಜನತೆಯಲ್ಲಿ ಹಿರಿಯರ ಕುರಿತು ಗೌರವ ಭಾವನೆ ವೃದ್ಧಿಗೆ ಸಹಕರಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಪ್ರೇಮಿಗಳ ದಿನದಂದು ’ಪೋಷಕರ ದಿನ’ ಆಚರಿಸುವಂತೆ ಶಾಲೆಗಳಿಗೆ ಮನವಿ
ಛತ್ತೀಸ್ಗಢ: ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಕಲಿಸುವ ಉದ್ದೇಶದಿಂದ ಎಲ್ಲ ಶಾಲಾ ಮಕ್ಕಳು ಫೆಬ್ರವರಿ 14 ರಂದು ’ಪೋಷಕರ ದಿನಾಚರಣೆ’ ಆಚರಿಸುವಂತೆ ಛತ್ತೀಸ್ಗಢ ಸರ್ಕಾರ ಹೇಳಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯ ವಿಶ್ವದಾದ್ಯಂತ ಆಚರಿಸಲಾಗುವ ವ್ಯಾಲೆಂಟೈನ್ ಡೇ ಬದಲು ’ಮಾತೃ ಪಿತೃ ದಿವಸ್’ ಆಚರಿಸುವಂತೆ ಎಲ್ಲ ಶಾಲಾ ಪ್ರಾಂಶುಪಾಲರು, ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಛತ್ತೀಸ್ಗಢ 2012 ರಿಂದ ’ಮಾತೃ ಪಿತೃ ದಿವಸ್’ ಆಚರಿಸುತ್ತ ಬಂದಿದ್ದು, 2015ರಲ್ಲೂ ಇದೇ ರೀತಿ ಶಾಲೆಗಳಿಗೆ ಸೂಚನೆ ನೀಡಲಾಗಿತ್ತು.
ಆದರೇ ಇದೇ ಮೊದಲ ಬಾರಿ ಶಾಲೆಗಳಲ್ಲಿ ಮಾತೃ ಪಿತೃ ದಿವಸ್ ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳ ಅರಿವು ಮೂಡಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.