ಲಖನೌ: ಸ್ವೀಟ್ ಅಂಗಡಿಯ ಮಾಲಿಕ ಸುರೇಶ್ ಸಾಹು ಎಂಬುವರು ’ಮೋದಿ ಜಿಲೇಬಿ’ಯನ್ನು ಉಚಿತವಾಗಿ ನೀಡಿ ಬಿಜೆಪಿಯನ್ನು ಬೆಂಬಲಿಸುವಂತೆ ವಿಶಿಷ್ಟವಾಗಿ ಪ್ರಚಾರ ಮಾಡುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಸಿಹಿ ಲೇಪನ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಗಳು ತೀವ್ರಗೊಂಡಿದ್ದು, ಸಾಹು ಅವರು ಅಕ್ಷರಗಳಲ್ಲಿ ಪ್ರಧಾನಿ ಮೋದಿ ಅವರ ಹೆಸರು ಹಾಗೂ ಬಿಜೆಪಿ ಪಕ್ಷದ ಚಿಹ್ನೆಯನ್ನೂ ಬರೆದು, ಉಚಿತವಾಗಿ ಹಂಚುವ ಮೂಲಕ ಮೋದಿ ನಡೆಯನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ.
ನಾವು ಯಾವಾಗಲೂ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದವರು. ಆದರೆ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸಲು ನಮಗೆ ಆಗದು. ಆದ್ದರಿಂದ ನಾವು ನಂಬಿದ ವೃತ್ತಿ ಮೂಲಕವೇ ಬಿಜೆಪಿಗೆ ಬೆಂಬಲಿಸುತ್ತಿರುವೆ ಎಂದು ಸ್ವೀಟ್ ಅಂಗಡಿ ಮಾಲಿಕ ಸುರೇಶ ಹೇಳಿದ್ದಾರೆ.
ಸ್ಥಳೀಯರೂ ಸುರೇಶ ಅವರ ಈ ವಿನೂತನ ಬೆಂಬಲಕ್ಕೆ ಸಹಮತ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕ ಕೌಶರ್ ಕಿಶೋರ್ ಅವರೂ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.