ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2017 ರ ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಲೋಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇಂದು (ಫೆ. 10) ಕೊಂಕಣಿ ಲೋಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೊಂಕಣಿಯಲ್ಲಿ 3 ಧರ್ಮಗಳ 41 ಸಮುದಾಯಗಳ ಜನರಿದ್ದಾರೆ. ಕೊಂಕಣಿಗರನ್ನು ಸಂಕೇತಿಸುವ ನೇರಳೆ ವರ್ಣ, ನಾವೆಲ್ಲರೂ ಭಾರತೀಯರು ಎಂಬರ್ಥದ ತ್ರಿವರ್ಣ ಮೂಡಿ ಬಂದಿದೆ. ಕೊಂಕಣಿಯ ಅನನ್ಯ ಸಾಂಸ್ಕೃತಿಕ ವಾದನ ಗುಮಟೆಯನ್ನು ಮೇಲ್ಭಾಗದಲ್ಲಿ ರಚಿಸಲಾಗಿದೆ. ಪೂರ್ಣ ಚಂದಿರ, ತೆಂಗಿನ ಮರಗಳು ಮತ್ತು ಸಮುದ್ರ ಕೊಂಕಣ ಕರಾವಳಿಯನ್ನು ಪ್ರತಿಬಿಂಬಿಸುತ್ತವೆ. ಕಾವಿವರ್ಣವು ಕೊಂಕಣಿಗರ ಸಾಂಪ್ರದಾಯಿಕ ಕಲೆಯಾದ ಕಾವಿಕಲೆಯನ್ನೂ ಮತ್ತು ಎಡಭಾಗದಲ್ಲಿ ಕಾವಿವರ್ಣದಲ್ಲಿ ಮೂಡಿಬಂದ ಲೇಖನಿ ಕೊಂಕಣಿಯ ಸಮಗ್ರ ಸಾಹಿತ್ಯವನ್ನೂ ಹಾಗೂ 5 ಮಂದಿ ಕಲಾವಿದರು ವಿವಿಧ ಜನಪದ ಸಂಸ್ಕೃತಿಗಳ ಬಾಹುಳ್ಯವನ್ನು,ಸೊಬಗನ್ನು ಪ್ರತಿನಿಧಿಸುತ್ತಿದ್ದಾರೆ. ಕೊಂಕಣಿಯ ಈ ಎಲ್ಲಾ ಸಾಹಿತ್ಯಕ, ಸಾಂಸ್ಕೃತಿಕ ಸೊಗಡನ್ನು ಅದರ ಎಲ್ಲಾ ವೈವಿಧ್ಯಗಳೊಡನೆ ಲೋಕಕ್ಕೆ ಪಸರಿಸುವ ಬಹು ದೊಡ್ಡ ಸಂಭ್ರಮವೇ ಕೊಂಕಣಿ ಲೋಕೋತ್ಸವ.
ಕೊಂಕಣಿಯ ವಿವಿಧ ಜನಪದ ಕಲೆಗಳನ್ನು ಬಿಂಬಿಸುವ ಮಳಿಗೆಗಳು, ಕೊಂಕಣಿ ಜನಜೀವನವನ್ನು, ಪರಿಸರವನ್ನು ಬಿಂಬಿಸುವ ಜೀವಂತ ಪ್ರಾತ್ಯಕ್ಷಿತೆ ಮಳಿಗೆಗಳು, ವಿವಿಧ ಕೊಂಕಣಿ ಪರಿಕರಗಳು, ಸಂಗೀತ ಸಾಧನಗಳು, ಕೊಂಕಣಿ ಪುಸ್ತಕ ಮತ್ತು ಸಿಡಿ ಮಾರಾಟ ಮಳಿಗೆಗಳು ಮತ್ತು ಕೊಂಕಣಿ ತಿಂಡಿ ತಿನಿಸು, ಊಟೋಪಚಾರ ಮಳಿಗೆಗಳು ಸೇರಿದಂತೆ ಆಟೋಟದ ವಸ್ತುಗಳು, ಬಟ್ಟೆಬರೆ, ಐಸ್ಕ್ರೀಮ್, ವಿವಿಧ ಶೈಲಿಯ ತಿಂಡಿ ತಿನಿಸುಗಳು, ಊಟ, ಸಿಹಿ ತಿಂಡಿಗಳು ಜನರನ್ನು ಆಕರ್ಷಿಸುತ್ತಿದೆ.
ಜನರಿಗೆ ಮಾಹಿತಿ ನೀಡಲು, ಪ್ರದರ್ಶನ ಮತ್ತು ಮಾರಾಟಕ್ಕಾಗಿ ಕೊಂಕಣಿ ಲೋಕೋತ್ಸವದ ಮೂರು ದಿನವೂ ಪುರಭವನದ ಸುತ್ತ, ವಿವಿಧ ಮಳಿಗೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.