ನವದೆಹಲಿ: ಶೀಘ್ರದಲ್ಲೇ ಪ್ರಯಾಣಿಕರಿಗೆ ನೈಜ ಸಮಯದಲ್ಲಿ ಟ್ರಾಫಿಕ್ ಅಪ್ಡೇಟ್ಗಳನ್ನು ಒದಗಿಸಲು 13 ರಾಜ್ಯಗಳ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೇಡಿಯೋ ಸೇವೆಗಳನ್ನು ಆರಂಭಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಹೆದ್ದಾರಿ ಸಲಹಾ ಸೇವೆಗಳ ಮೇಲಿನ ಪ್ರಾಯೋಗಿಕ ಯೋಜನೆಗಳ ನೈಜ ಸಮಯದಲ್ಲಿ ಟ್ರಾಫಿಕ್ ಅಪ್ಡೇಟ್ಗಳನ್ನು ಒದಗಿಸುವ ಸೇವೆಯನ್ನು ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ- 8ರಲ್ಲಿ ವಿಶ್ವ ಬ್ಯಾಂಕ್ ತಾಂತ್ರಿಕ ಸಹಾಯ ಕಾರ್ಯಕ್ರಮದ ಅಡಿಯಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ತಾಂತ್ರಿಕ ಕಾರ್ಯಕ್ರಮದ ಅಡಿಯಲ್ಲಿ ಎರಡನೇ ಹಂತದ ಯೋಜನೆಯನ್ನು ಇನ್ನಷ್ಟು ಹೆದ್ದಾರಿಗಳಲ್ಲಿ ಅಳವಡಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.
ದೆಹಲಿ, ಅಳ್ವಾರ್, ಜೈಪುರಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೇಂದ್ರಗಳ ಮೂಲಕ ಪ್ರತಿ 5 ನಿಮಿಷಗಳ ಕಾಲಾವಧಿಯಲ್ಲಿ ನೈಜ ಸಮಯದ ಟ್ರಾಫಿಕ್ ಅಪ್ಡೇಟ್ಗಳನ್ನು ಪ್ರತಿ ದಿನ 18 ಬಾರಿ ಪ್ರಕಟಣೆಗಳನ್ನು ಒದಗಿಸುತ್ತಿದೆ.
ಸಂಚಾರ ದಟ್ಟಣೆ, ಅಪಘಾತ, ಟೋಲ್ ಗೇಟ್ಗಳಲ್ಲಿ ಕಾಯುವ ಸಮಯ, ಹವಾಮಾನ, ರಸ್ತೆ ತಿರುವುಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.