ಬೆಳ್ತಂಗಡಿ: ಇತ್ತೀಚೆಗೆ ಕಕ್ಕಿಂಜೆಯಲ್ಲಿ ಅಮಾಯಕ ಯುವಕ ಸುನಿಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆಗೈದಿದ್ದು ಈ ಬಗ್ಗೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಅನ್ಯಕೋಮಿನ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿ ಉಳಿದವರನ್ನು ಬಂಧಿಸದೇ ಪೊಲೀಸರು ರಕ್ಷಿಸುವ ಕೆಲಸ ಮಾಡಿದ್ದಾರೆ. ಮೇ. 12ರ ಒಳಗೆ ಬಂಧಿಸದಿದ್ದರೆ ಕಕ್ಕಿಂಜೆಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಡಿ. ಹೇಳಿದ್ದಾರೆ.
ಅವರು ಬುಧವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾವುದೊ ದ್ವೇಷದಿಂದ ಸುನಿಲ್ ಎಂಬವನ ಮೇಲೆ ಉಸ್ಮಾನ್, ಹನೀಫ್, ಬಶೀರ್, ಅನ್ಸಾರ್, ಸುಲೈಮಾನ್ ಹಾಗೂ ಇತರರು ಹಲ್ಲೆ ಮಾಡಿದ್ದರು. ಎರಡೂ ತಂಡಗಳ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದೆ.
ಒಂದೇ ಸಮುದಾಯದ ಐವರನ್ನು ಮಾತ್ರ ಪೊಲೀಸರು ಬಂಧಿಸಿದ್ದು ಅನ್ಯಕೋಮಿನ 5 ಮಂದಿ ಆರೋಪಿ ಹಾಗೂ 15 ಮಂದಿ ಇತರರ ಮೇಲೆ ಪ್ರಕರಣ ದಾಖಲಾಗಿದ್ದರೂ ಇಬ್ಬರನ್ನು ಮಾತ್ರ ಬಂಧಿಸಿದ್ದರು.ಉಳಿದವರನ್ನು ಬಂಧಿಸದೆ ರಕ್ಷಿಸುವ ಕೆಲಸ ಮಾಡುತ್ತಿದೆ. ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಂಗ್ಲಾ ದೇಶದ ಉದ್ಯೋಗಿ ಓರ್ವ ಭಾಗಿಯಾಗಿದ್ದು ಇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೂ ಯಾವುದೇ ಪ್ರಕರಣ ದಾಖಲಿಸದೇ ಬಿಟ್ಟಿದ್ದಾರೆ. ಇದೇ ಪರಿಸರದಲ್ಲಿ ಹಿಂದೆ ನಾಲ್ಕೈದು ಪ್ರಕರಣಗಳು ಇದೇ ರೀತಿ ನಡೆದಿದ್ದರೂ ಪೊಲೀಸರು ಒಂದೇ ಸಮುದಾಯಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಈ ಮೇಲಿನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಗೊಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ನ ತಾಲೂಕು ಅಧ್ಯಕ್ಷ ತಾರನಾಥ ಎಸ್, ಭಜರಂಗದಳದ ಮುಖಂಡರುಗಳಾದ ಶ್ರೀನಿವಾಸ್, ದಿನೇಶ್ ಚಾರ್ಮಾಡಿ, ಸಂದೇಶ್ ಚಾರ್ಮಾಡಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.