ನವದೆಹಲಿ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ನೋಟ್ ಬ್ಯಾನ್ ದಿಟ್ಟ ನಿರ್ಧಾರ. ಇದಕ್ಕೆ ಜನರ ಭಾರೀ ಬೆಂಬಲವೂ ಸಿಕ್ಕಿದೆ. ಗಾಂಧೀಜಿ ಅವರು ರೈಟ್ ಕಾಸ್ ನೆವರ್ ಫೇಲ್ಸ್ ಅಂತಾ ಹೇಳಿದ್ದು ಇಲ್ಲಿ ಉಲ್ಲೇಖನೀಯ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.
ಇಂದು ಸಂಸತ್ನಲ್ಲಿ ಅವರು ಬಜೆಟ್ ಮಂಡಿಸುವ ವೇಳೆ, ಬಿಜೆಪಿ ಕೇಂದ್ರದ ಅಧಿಕಾರವಹಿಸಿಕೊಂಡ ನಂತರ ತೆಗೆದುಕೊಂಡ ಮಹತ್ವದ ನಿರ್ಣಯಗಳ ಕುರಿತು ಹೇಳುವಾಗ ನೋಟ್ ಬ್ಯಾನ್ ವಿಷಯ ಪ್ರಸ್ತಾಪಿಸಿದರು.
ಕಾಳ ಧನಿಕರು ಹಾಗೂ ಉಗ್ರರ ನಿದ್ದೆಗೆಡಿಸಿದ ನೋಟು ಅಮಾನ್ಯೀಕರಣ ನಿರ್ಣಯ ಜನ ಸ್ವಾಗತಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಬದುಕಿನ ಕನಸಿನ ಹಿನ್ನೆಲೆಯಲ್ಲಿ ಜನ ಪ್ರೀತಿಯಿಂದ ಸ್ವೀಕರಿಸಿದ್ದಾರೆ, ಪ್ರಶಂಸಿಸಿದ್ದಾರೆ ಎಂದ ಜೇಟ್ಲಿ ಅವರು, ಜನರಿಗೆ ಅಭಿನಂದನೆ ಸಲ್ಲಿಸುವುದನ್ನು ಮರೆಯಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.