ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 7ರಂದು ಜನಿಸಿದರು. ರವೀಂದ್ರನಾಥರಿಗೆ ಸಾಹಿತ್ಯದ ಕಡೆಯಿದ್ದ ಒಲವು ಅಪಾರ ಅದಕ್ಕಾಗಿಯೇ ಅವರು ಶಾಂತಿನಿಕೇತನವನ್ನು ಸ್ಥಾಪಿಸಿದರು. ಅಸ್ಪೃಶ್ಯತೆಯ ವಿರುದ್ಧ ದಲಿತರ ಪರವಾದ ಹೋರಾಟಕ್ಕೆ ಸಾಥ್ ನೀಡಿದರು.
ಗಾಂಧಿ ನೇತೃತ್ವದ ಸ್ವರಾಜ್ ಚಳವಳಿಗೆ ಬೆಂಬಲಿಸಿದ ಅವರು “ಜಾತಿ ಪದ್ಧತಿಯ ಕಾಠಿಣ್ಯ” ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ಕಟುವಾಗಿ ಖಂಡಿಸಿದರು. ಅಲ್ಲದೇ ಈ ಎಲ್ಲಾ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ನಾಟಕ ಮತ್ತು ಕವನಗಳನ್ನು ರಚಿಸಿದರು. ಯಶಸ್ವಿ ಆಂದೋಲನದ ಮೂಲಕ ಗುರುವಾಯೂರ್ ದೇವಾಲಯವನ್ನು ದಲಿತರ ಪ್ರವೇಶಕ್ಕೆ ಮುಕ್ತಗೊಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ ಸರಿಸುಮಾರು 2230ಕ್ಕಿಂತ ಕವನಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮತ್ತು ಗೀತಾಂಜಲಿಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ 1913 ದೊರಕಿತು. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷಿಯಾದ ಮೊದಲ ವ್ಯಕ್ತಿ ಮತ್ತು ಮೊದಲ ಭಾರತೀಯಯ ಎಂಬ ಹೆಗ್ಗಳಿಕೆ ಅವರದ್ದು.. ಸ್ವಾತಂತ್ರ್ಯ ಹೋರಾಟದ ಸಂಧರ್ಭ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಖಂಡಿಸಿ 1919ರಲ್ಲಿ ತನಗೆ ದೊರೆತ ನೋಬೆಲ್ ಪ್ರಶಸ್ತಿ ಪುರಸ್ಕಾರವನ್ನು ಹಿಂದಿರುಗಿಸಿದರು. ಇದು ಇವರ ಜೇಷ್ಟತೆಗೆ ಹಿಡಿದ ಕೈಗನ್ನಡಿ.
ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಬರೆದವರು ಗುರುದೇವ ರವೀಂದ್ರರೆ. ಮಾತ್ರವಲ್ಲ ಬಾಂಗ್ಲಾದ ರಾಷ್ಟ್ರಗೀತೆಯಾದ ಅಮರ್ ಸೋನಾರ್ ಬಾಂಗ್ಲಾ ಮತ್ತು ಶ್ರೀಲಂಕಾ ರಾಷ್ಟರಗೀತೆಯ ಮೂಲಗೀತೆಯನ್ನು ಗುರುದೇವ ರವೀಂದ್ರರ ಕವಿತೆ ಯಿಂದ ಆರಿಸಿಕೊಳ್ಳಲಾಗಿದೆ. ಹೀಗೆ ಗುರುದೇವ ರವೀಂದ್ರರು ಒಂದಕ್ಕಿಂತ ಹೆಚ್ಚು ದೇಶಗಳಿಗೆ ರಾಷ್ಟ್ರಗೀತೆ ಬರೆದ ಕವಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ, ಗಾಂಧಿಜೀಯವರು ರವೀಂದ್ರನಾಥ ಠಾಗೋರ್ರ ಸಾಧನೆಮಯ ಜೀವನಕ್ಕೆ ಗುರುದೇವ ಬಿರುದು ನೀಡಿದರು. ಆದುದರಿಂದಲೇ ಅವರನ್ನು ಗುರುವೇವ ರವೀಂದ್ರನಾಥ ಠಾಗೋರ್ ಎಂದು ಕರೆಯಲಾಗುತ್ತದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.