ನವದೆಹಲಿ: ಪ್ಯಾಕೇಜ್ ಟೂರ್ಸ್, ಟ್ರಾನ್ಸ್ಪೋರ್ಟ್, ಕ್ಯಾಬ್ ಸೇವೆ ಇತ್ಯಾದಿಗಳ ದರ ಪ್ರಸಕ್ತ ಬಜೆಟ್ನಲ್ಲಿ ಏರಿಕೆಯಾಗುವ ಸಂಭವ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸೇವಾ ತೆರಿಗೆಯು 14% ಇದ್ದು, ಮುಂಬರುವ ಬಜೆಟ್ನಲ್ಲಿ ಕೃಷಿ ಹಾಗೂ ಸ್ವಚ್ಛ ಭಾರತದ ಸೆಸ್ ಅನ್ನು ಪ್ರತ್ಯೇಕವಾಗಿ 0.50% ರಷ್ಟು ಸೇರಿಸಿ, ಒಟ್ಟು ಸೇವಾ ತೆರಿಗೆ 15% ಏರಿಕೆಯಾಗುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗಿದೆ.
ಕೆಲವು ತಜ್ಞರ ಪ್ರಕಾರ, ಸೇವಾ ತೆರಿಗೆಯ ದರಗಳು ವಿವಿಧ ರೂಪದಲ್ಲಿದ್ದು, ಮೂಲ ಸೇವೆಗಳಿಗೆ 12% ಹಾಗೂ ಉಳಿದವುಗಳಿಗೆ 15% ತೆರಿಗೆ ವಿಧಿಸುವ ಲಕ್ಷಣಗಳು ಹೆಚ್ಚಿವೆ. ಏಪ್ರಿಲ್ನಿಂದ ಜೂನ್ವರೆಗೆ ಸಂಗ್ರಹಿಸುವ ತೆರಿಗೆ ಹಣವು, ಸರ್ಕಾರದ ಬೊಕ್ಕಸಕ್ಕೆ ತುಸು ಲಾಭ ತರಲಿದ್ದು, ನೋಟು ಅಮಾನ್ಯೀಕರಣದಿಂದಾದ ಪರಿಣಾಮಕ್ಕೂ ಸಹಕಾರಿಯಾಗಲಿದೆ.
ಸೇವಾ ತೆರಿಗೆಯು ಇದುವರೆಗೂ ಕೇಂದ್ರದ ಲೆವಿ ಆಗಿದ್ದು, ಇದೀಗ ನೂತನ ಜಿಎಸ್ಟಿ ನಿಯಮದ ಅನ್ವಯ ಇದನ್ನು ಕೇಂದ್ರ ಹಾಗೂ ರಾಜ್ಯಕ್ಕೆ ಸಮಪಾಲು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.