ಹುಬ್ಬಳ್ಳಿ: ಕೃಷಿಯು ಭಾರತದ ಅವಿಭಾಜ್ಯ ಅಂಗ. ಪಾರಂಪರಿಕ ಕೃಷಿಗೆ ಸಂಬಂಧಿಸಿದಂತೆ ಹಿಂಜರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ನಗರದ ಖಾಸಗಿ ಹೊಟೆಲ್ವೊಂದರಲ್ಲಿ ದಿ ಇಂಡಸ್ ಎಂಟರ್ಪ್ರೈನರ್ ವತಿಯಿಂದ ಶುಕ್ರವಾರ ಆರಂಭಗೊಂಡ ಟೈಕಾನ್-2017 ಉದ್ಯಮಿದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಜನತೆ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಉದ್ಯೋಗಕ್ಕೆ ಮುಂದಾಗುವುದು ಇಂದಿನ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಾಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸರಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಹುಚ್ಚಿನಲ್ಲಿ ದಾರಿದ್ರ್ಯ ಮೈಗೂಡುತ್ತಿದೆ. ಹೀಗಾಗಿ ಪ್ರತಿಭಾವಂತರಲ್ಲಿ ಅಡಗಿದ ಸೃಜನಾತ್ಮಕ ಪ್ರತಿಭೆ ಸಂಬಳಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ. ಶಿಕ್ಷಿತರು ರಾಜಕೀಯ ಕ್ಷೇತ್ರಕ್ಕೆ ಬಂದರೆ, ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ ಎಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಸ್ತುತ ಸ್ವ-ಉದ್ಯೋಗದಲ್ಲಿ ಮಹಿಳೆಯರ ಪಾತ್ರ ಕಡಿಮೆ ಇದೆ. ಮಹಿಳೆಯರು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದ್ದು, ಉದ್ಯೋಗದಲ್ಲಿ ತೋರುವ ಸೃಜನಾತ್ಮಕತೆಯನ್ನು ಸ್ವ-ಉದ್ಯೋಗದಲ್ಲಿ ತೊಡಗಿಸಿದರೆ, ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.
ಸಾಧನೆಗೆ ವಿಶ್ವಾಸ ಮುಖ್ಯ
ಉದ್ಯಮದಲ್ಲಿ ಸಾಧನೆ ಮಾಡಲು ವಿಶ್ವಾಸ ಬಹಳ ಮುಖ್ಯವಾಗಿದೆ. ಪಾಲಕರ ಪ್ರೋತ್ಸಾಹ, ಉತ್ತೇಜನದಿಂದಾಗಿ ಗೆಟ್ ಸಿಂಪಲ್ ಟ್ರಸ್ಟ್ ಸಣ್ಣದಾಗಿ ಬೆಳೆಯುತ್ತಿದೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಗುರಿ ಹೊಂದಲಾಗಿದೆ ಎಂದು ಟ್ರಸ್ಟ್ನ ಸಹ ಸಂಸ್ಥಾಪಕಿ ಚೈತ್ರಾ ಚಿದಾನಂದ ತಮ್ಮ ಉದ್ಯೋಗದ ಅನುಭವಿಗಳನ್ನು ಹಂಚಿಕೊಂಡರು.
ಉದ್ಯಮಿದಾರರ ಸಮಾವೇಶದ ಮಹಿಳಾ ಉದ್ಯಮಶೀಲತೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯದ ವಾತಾವರಣ ಮೂಡಿಸಿಕೊಳ್ಳದೇ, ನಿರ್ಭಿತಿಯಿಂದ ಕಾರ್ಯ ಮಾಡಿಕೊಂಡು ಹೋದಲ್ಲಿ ಯಶಸ್ವಿ ಖಂಡಿತ ಎಂದರು.
ಮಹಿಳೆಯರನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ. ಮಹಿಳೆಯರಿಗೆ ಪುರುಷರಿಂದ ಸಹಕಾರ ಸುರಕ್ಷತೆ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಶ್ಲೇಸ್ ವ್ಯವಹಾರ ನಮಗೆ ಅನುಕೂಲವಾಗಿದೆ. ಇದು ಬರುವ ದಿನಗಳಲ್ಲಿ ಯಶಸ್ವಿಯಾಗಿ ಕ್ಯಾಶ್ಲೆಸ್ಗೆ ಎಲ್ಲರೂ ಅಣಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.