ವಿಶ್ವಸಂಸ್ಥೆ: ಭೂಕಂಪದಿಂದ ಜರ್ಜರಿತಗೊಂಡಿರುವ ನೆರೆಯ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕೆ, ಪುನರ್ವಸತಿ ಕಲ್ಪಿಸುವುದಕ್ಕೆ ಕಟಿಬದ್ಧವಾಗಿರುವುದಾಗಿ ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.
ಅಲ್ಲದೇ ನೇಪಾಳ ಸರ್ಕಾರದ ಸಲಹೆ ಮತ್ತು ಸಮನ್ವಯದೊಂದಿಗೆಯೇ ಭಾರತ ಎಲ್ಲಾ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸಿದೆ ಎಂದು ವಿಶ್ವಸಂಸ್ಥೆ ರಾಯಭಾರಿಯ ಉಪ ಖಾಯಂ ಪ್ರತಿನಿಧಿ ಭಾಗ್ವಂತ್ ಬಿಷ್ಣೋಯ್ ಸ್ಪಷ್ಟಪಡಿಸಿದ್ದಾರೆ.
‘ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯ ಮುಗಿದಿದೆ, ಇದೀಗ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಅಲ್ಲಿನ ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ’ ಎಂದು ವಿಶ್ವಸಂಸ್ಥೆಗೆ ಭೂಕಂಪದ ಬಳಿಕದ ನೇಪಾಳದ ಸ್ಥಿತಿಗತಿಗಳನ್ನು ವಿವರಿಸುವ ಸಂದರ್ಭ ಬಿಷ್ಣೋಯ್ ತಿಳಿಸಿದ್ದಾರೆ.
ಮೃತ ಜನತೆಗೆ ಶ್ರದ್ಧಾಂಜಲಿ ಸಮರ್ಪಿಸಿದ ಅವರು, ನೇಪಾಳದ ಜನರು ಅತ್ಯಂತ ಧೈರ್ಯದಿಂದ ದುರಂತವನ್ನು ಎದುರಿಸಿದರು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತಿಹಾಸ, ಗಡಿಯೊಂದಿಗೆ ನೇಪಾಳದ ಪಾಲುದಾರನಾಗಿರುವ ಭಾರತ ಅದರ ಸಂಕಷ್ಟದಲ್ಲೂ ಪಾಲುದಾರನಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.