ಕುಂದಾಪುರ: ಸುಮಾರು ೩೫ ವರ್ಷಗಳಿಂದ ನಡೆಯುತ್ತಿದ್ದ ವಾರಾಹಿ ನೀರಾವರಿ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲುವೆಗೆ ನೀರು ಹರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.
ಸುಮಾರು 9.43 ಕೋ.ರೂ. ವೆಚ್ಚದ ನೀರಾವರಿ ಯೋಜನೆಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಗುದ್ದಲಿಪೂಜೆ ನಡೆಸಿದ್ದು, ೩೫ವರ್ಷಗಳ ಬಳಿಕ ಲೋಕಾರ್ಪಣೆಗೊಂಡಿದೆ. ವಾರಾಹಿ ಯೋಜನೆ ಉದ್ಘಾಟನಾ ಕಾರ್ಯಕ್ರಮವು ಸಿದ್ದಾಪುರ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಿತು. ಮುಖ್ಯಮಂತ್ರಿಗಳು ಹೊಳೆಶಂಕರ ನಾರಾಯಣದಲ್ಲಿರುವ ಡೈವರ್ಶನ್ ಕಾಲುವೆಗೆ ನೀರು ಬಿಡುವ ಮೂಲಕ ಚಾಲನೆ ನೀಡಿದರು.
35 ವರ್ಷಗಳ ಕಾಲ ನೀರಿಗಾಗಿ ಹಾತೊರೆಯುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದಂತಾಗಿದೆ. ನೀರಾವರಿ ಸಚಿವ ಎಂ.ಬಿ. ಪಾಟೀಲ್, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಡಿಸ್, ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಹಾಗೂ ಉಡಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ, ಜಿ.ಪಂ.ಸದಸ್ಯೆ ಮಮತಾ ಆರ್ ಶೆಟ್ಟಿ, ತಾ.ಪಂ ಸದಸ್ಯೆ ಲಲಿತಾ ಆರ್. ಶೆಟ್ಟಿ, ವಾರಾಹಿ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯ, ಕಾಂಗ್ರೆಸ್ ಮುಖಂಡ ಗಫೂರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಸಂಜೀವ ಶೆಟ್ಟಿ, ಬೈಂದೂರು ಬ್ಲಾಕ್ ಅಧ್ಯಕ್ಷ ರಮೇಶ ಗಾಣಿಗ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಯು. ಸುಧಾಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ವಿಶಾಲ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಕನಕವಲ್ಲಿ, ಸಹಾಯಕ ಕಮಿಷನರ್ ಚಾರುಲತಾ ಸೋಮಾಲಿ, ತಹಶೀಲ್ದಾರ್ ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ಹಂತದ ಕಾಮಗಾರಿ ಪೂರ್ಣ: ಸಿದ್ದಾಪುರ ಸಮೀಪದ ಹೊರಿಬ್ಬೆ ಎಂಬಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಡೈವರ್ಷನ್ ವಿಯರ್ ಅನ್ನು ನಿರ್ಮಾಣ ಮಾಡಲಾಗಿದ್ದು, ಈ ವಿಯರ್ 147.20 ಮೀ. ಇದೆ. ವಾರಾಹಿ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವ 18.725 ಕಿ.ಮೀ. ಉದ್ದದ ವಾರಾಹಿ ಬಲದಂಡೆ ಕಾಲುವೆಯಲ್ಲಿ 1645 ಕಿ.ಮೀ. ಉದ್ದದ ಟರ್ನಲ್, 806 ಮೀ. ಉದ್ದದ ಅಕ್ವಡಕ್ಡ್,೭೮೦ ಮೀ. ಉದ್ದದ ಕಟ್ ಮತ್ತು ಕವರ್ಗಳಿವೆ. ವಾರಾಹಿ ಎಡದಂಡೆ ಕಾಲುವೆ 44.35 ಕಿ.ಮೀ. ಉದ್ದವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.