ನವದೆಹಲಿ : ನೋಟು ನಿಷೇಧದ ನಂತರ ದೇಶದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳು ಮರುಜೀವ ಪಡೆದಿವೆ ಎನ್ನಲಾಗಿದೆ.
ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ನಂತರ ದೇಶದಾದ್ಯಂತ ಇರುವ ಸುಮಾರು 4 ಲಕ್ಷ ನಿಷ್ಕ್ರಿಯ ಖಾತೆಗಳು ಮರುಜೀವ ಪಡೆದಿದ್ದು, ಸುಮಾರು 6,000 ಕೋಟಿ ರೂ. ಜಮೆಯಾಗಿದೆ ಎನ್ನಲಾಗಿದೆ. ಈ ಕುರಿತು ಐಟಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
2 ವರ್ಷಗಳವರೆಗೆ ಯಾವುದೇ ವಹಿವಾಟು ನಡೆಯದೆ ಇರುವಂತಹ ಖಾತೆಗಳನ್ನು ಬ್ಯಾಂಕ್ಗಳು ನಿಷ್ಕ್ರಿಯ ಖಾತೆ ಎಂದು ಪರಿಗಣಿಸುತ್ತದೆ. ಆದರೆ ನೋಟು ನಿಷೇಧದ ನಂತರ 4,30,288 ನಿಷ್ಕ್ರಿಯ ಖಾತೆಗಳಿಗೆ 6,400.51 ಕೋಟಿ ರೂ. ಹಣ ಜಮೆಯಾಗಿದೆ. ನವೆಂಬರ್ 8 ರಿಂದ ನವೆಂಬರ್ 22 ರೊಳಗೆ ಈ ಖಾತೆಗಳು ವಹಿವಾಟು ನಡೆಸಿದ್ದು 799 ಕೋಟಿ ರೂ. ಹಣವನ್ನು ಈಗಾಗಲೇ ಈ ಖಾತೆಗಳಿಂದ ಹಿಂತೆಗೆಯಲಾಗಿದೆ.
ಕೇಂದ್ರ ಸರ್ಕಾರವು ಪ್ರತಿ ಖಾತೆಗೆ 2.5 ಲಕ್ಷ ರೂ. ಜಮೆಯಾಗುವವರೆಗೆ ಐಟಿ ಅಧಿಕಾರಿಗಳು ಅಂತಹ ಖಾತೆಗಳ ವಿಚಾರಣೆ ಮಾಡುವುದಿಲ್ಲ ಎಂದು ನೋಟು ನಿಷೇಧದ ಪ್ರಾರಂಭದಲ್ಲಿ ತಿಳಿಸಿತ್ತು. ಈ ಹಿನ್ನಲೆಯಲ್ಲಿ ನಿಷ್ಕ್ರಿಯವಾಗಿದ್ದು ಹಲವು ಖಾತೆಗಳು ಮರುಜೀವ ಪಡೆದಿದ್ದು, 2 ಲಕ್ಷ ರೂ. ಗಿಂತ ಕಡಿಮೆ ಹಣ ನಿಷ್ಕ್ರಿಯ ಖಾತೆಗಳಲ್ಲಿ ಜಮೆಯಾಗಿದೆ. ಮೂಲಗಳ ಪ್ರಕಾರ ಹಣ ವರ್ಗಾವಣೆಯು ಆನ್ಲೈನ್ ಮೂಲಕ ಆಗಿದೆ ಎನ್ನಲಾಗಿದೆ. ಈ ಕುರಿತು ಐಟಿ ಅಧಿಕಾರಿಗಳು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.