News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹುಬ್ಬಳ್ಳಿ ವ್ಯಕ್ತಿಗೆ ‘ಲಕ್ಕಿ ಗ್ರಾಹಕ್’ ಬಹುಮಾನ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಆನ್‌ಲೈನ್ ಶಾಪಿಂಗ್ ಮಾಡಿದ್ದ ನಗರದ ಶಿವಾನಂದ ಎಂಬುವರಿಗೆ ‘ಲಕ್ಕಿ ಗ್ರಾಹಕ್’ ಯೋಜನೆಯಡಿ 1000 ರೂ. ಬಹುಮಾನ ಸಿಕ್ಕಿದೆ.

shivananda

ಶಿವಾನಂದ ಅವರು ಕಳೆದ ವಾರ ಅಭೀಜ್ ಮಾರ್ಕೆಟ್‌ನಲ್ಲಿ ಆನ್‌ಲೈನ್‌ನಲ್ಲಿ 300 ರೂ. ಮೌಲ್ಯದ ಅಗರಬತ್ತಿ ಖರೀದಿಸಿದ್ದರು. ಈಗ ಅವರ ಖಾತೆಗೆ 1000 ರೂ. ಜಮಾ ಆಗಿದ್ದು, ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕ್ಯಾಶ್‌ಲೆಸ್ ವಹಿವಾಟು ಮಾಡುವುದರಿಂದ ಸಾಕಷ್ಟು ಅನುಕೂಲಗಳಿವೆ. ಇದನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಮೋದಿಯವರ ಕನಸು ನನಸು ಮಾಡಬೇಕಿದೆ. ಇದರಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಶಿವಾನಂದ ಅವರು ಅಭಿಪ್ರಾಯಪಟ್ಟರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top