ಮುಂಬಯಿ: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ಹಿಂಸಾಚಾರದ ಬಗ್ಗೆ ಟ್ವಿಟರ್ ವೀಡಿಯೋ ಸಂದೇಶದ ಮೂಲಕ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು ಈಗ ವೈರಲ್ ಆಗಿದೆ.
ಈ ಘಟನೆ ನಿಜಕ್ಕೂ ನಾಚಿಗೆಗೀಡಾಗಿದೆ ಎಂದು ಟ್ವೀಟ್ ಮಾಡಿದ ಅವರು, ಕಿರುಕುಳ ನಡೆಸಿದ ಆರೋಪಿಗಳನ್ನು ‘ಮೃಗ’ಗಳಿಗೆ ಹೋಲಿಸಿದ್ದಾರೆ.
‘ಬೆಂಗಳೂರು ಘಟನೆಯು ನಾವು ವಿಕಾಸದಿಂದ ಹಿಂದಕ್ಕೆ ತೆರಳುತ್ತಿದ್ದೇವೆ ಎಂದೆನಿಸುತ್ತಿದೆ. ಮಾನವರು ಪ್ರಾಣಿಗಳಂತೆ ವರ್ತಿಸುವಂತೆ ಭಾಸವಾಗುತ್ತಿದೆ. ಆದರೆ ಇಂಥವರಿಗಿಂತ ಪ್ರಾಣಿಗಳು ನಿಜಕ್ಕೂ ಮತ್ತೂ ಉತ್ತಮ. ಈ ಘಟನೆ ನಿಜಕ್ಕೂ ಅವಮಾನಕರ’ ಎಂದು ತಮ್ಮ ಟ್ವಿಟರ್ ವೀಡಿಯೋದಲ್ಲಿ ಹೇಳಿದ್ದಾರೆ.
The Bangalore incident makes me feel we r evolving backwards,from humans to animals,rather beasts coz even animals are better!Truly shameful pic.twitter.com/FJwJ80Mkby
— Akshay Kumar (@akshaykumar) January 5, 2017
ಈ ವೀಡಿಯೋ 25,000 ಸಾವಿರ ಲೈಕ್ಗಳು ಮತ್ತು 12000 ಸಾವಿರ ರೀಟ್ವೀಟ್ಗಳೊಂದಿಗೆ ವೈರಲ್ ಆಗಿದೆ.
ಈ ಘಟನೆ ಕುರಿತು ವಿಷಯ ತಿಳಿದಾಗ ನನ್ನ ರಕ್ತ ಕುದಿಯಿತು ಎಂದು ಅಕ್ಷಯ್ ಈ ಸಂದರ್ಭ ಹೇಳಿದ್ಧಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.