×
Home About Us Advertise With s Contact Us

ಮೋದಿಯನ್ನು ಭೇಟಿಯಾದ ನಿತೀಶ್

nithishನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿನ ಪ್ರಧಾನಿ ನಿವಾಸ 7 ಆರ್‌ಸಿಆರ್‌ನಲ್ಲಿಯೇ ಇಬ್ಬರೂ ಮುಖಂಡರು ಮಾತುಕತೆ ನಡೆಸಿದರು.

ಬಿಹಾರ ಹಣಕಾಸಿನ ವಿಷಯದ ಬಗ್ಗೆ ನಿತೀಶ್ ಪ್ರಧಾನಿಯೊಂದಿಗೆ ಚರ್ಚಿಸಿದರು. ಅಲ್ಲದೇ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.

ಇದು ಪ್ರಧಾನಿ ಮತ್ತು ಮುಖ್ಯಮಂತ್ರಿಯ ನಡುವಣ ಭೇಟಿ, ವೈಯಕ್ತಿಕ ಭೇಟಿಯಲ್ಲ. ಇದರಲ್ಲಿ ವಿಶೇಷ ಪಡಬೇಕಾದದ್ದು ಏನೂ ಇಲ್ಲ ಎಂದು ಜೆಡಿಯು ಈಗಾಗಲೇ ಸ್ಪಷ್ಟಪಡಿಸಿದೆ.

ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ನಿತೀಶ್ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದರು. ಬಳಿಕ ಇಬ್ಬರು ನಾಯಕರ ನಡುವೆ ವಾಕ್ಸಮರ ಮುಂದುವರೆದಿದ್ದು. ಇದೀಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಇಬ್ಬರು ಮುಖಂಡರು ಚರ್ಚೆ ನಡೆಸಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.

 

Recent News

Back To Top
error: Content is protected !!