ದುಬೈ: ಒಂದು ಮಹತ್ವದ ಶಿಸ್ತುಕ್ರಮದಂತೆ ಮುಂಬಯಿ ದಾಳಿಯ ಮಾಸ್ಟರ್ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ 15,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಇಬ್ರಾಹಿಂ ಯುಎಇಯಲ್ಲಿ ವಿವಿಧ ಉನ್ನತ ಕಂಪೆನಿಗಳಲ್ಲಿ ಷೇರುಗಳು, ಹೋಟೆಲ್ಗಳು ಮತ್ತು ಇತರ ಹಲವು ಆಸ್ತಿಗಳನ್ನು ಹೊಂದಿದ್ದಾನೆ. ಯುಎಇ ಅಧಿಕಾರಿಗಳು ದುಬೈಯಲ್ಲಿರುವ ದಾವೂದ್ನ ಆಸ್ತಿಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಯುಎಇ ಸರ್ಕಾರ ಇತ್ತೀಚೆಗೆ ದುಬೈನಲ್ಲಿ ವಾಂಟೆಡ್ ಕ್ರಿಮಿನಲ್ ದಾವೂದ್ ಇಗ್ರಾಹಿಂನ ಆಸ್ತಿಗಳ ಬಗ್ಗೆ ವಿಚಾರಣೆ ಆರಂಭಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಳೆದ ವರ್ಷ ಯುಎಇ ಭೇಟಿ ಸಂದರ್ಭ ಅಲ್ಲಿಯ ಅಧಿಕಾರಿಗಳಿಗೆ ದಾವೂದ್ನ ಆಸ್ತಿಗಳ ಮಾಹಿತಿ ಇರುವ ಪಟ್ಟಿಯನ್ನು ಒದಗಿಸಲಾಗಿತ್ತು.
ಅನಂತರ ಭಾರತ ಸರ್ಕಾರ ದಾವೂದ್ ಹಾಗೂ ಆತನ ಸಹಚರರ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಯುಎಇ ಸರ್ಕಾರಕ್ಕೆ ಮನವಿ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.