ಗುರ್ಗಾಂವ್: ಹರ್ಯಾಣ ಪೊಲೀಸ್ನ ಸೈಬರ್ ಅಪರಾಧ ಪ್ರಕರಣ ನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುವ ಗುರಿಯೊಂದಿಗೆ ಗುರ್ಗಾಂವ್ನಲ್ಲಿ ಡಿಜಿಟಲ್ ತನಿಖಾ ತರಬೇತಿ ಮತ್ತು ವಿಶ್ಲೇಷಣೆ ಕೇಂದ್ರ (ಡಿಐಟಿಎಸಿ)ವನ್ನು ಸ್ಥಾಪಿಸಲಾಗಿದೆ.
ಇದು ದೇಶದ ಮೊದಲ ಡಿಜಿಟಲ್ ತನಿಖಾ ಕೇಂದ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಟಿಎಸಿ ಕೇಂದ್ರ ಹೆಚ್ಚು ಪರಿಣಾಮಕಾರಿಯಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಸೈಬರ್ ಅಪರಾಧಗಳ ತರಬೇತಿ ನೀಡಲು ಉನ್ನತ ಮಟ್ಟದ ಉಪಕರಣಗಳು, ವೈಜ್ಞಾನಿಕ ಪ್ರಯೋಗಾಲಯ, ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳುಳ್ಳ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಲ್ಯಾಬ್, ಮತ್ತಿತರ ವ್ಯವಸ್ಥೆಯನ್ನು ಹೊಂದಿದೆ.
ಹರ್ಯಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಇದನ್ನು ಉದ್ಘಾಟಿಸಿದ್ದು, ಡಿಐಟಿಎಸಿ ಕೇಂದ್ರವನ್ನು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್ಟಿಆರ್ಒ) ಮೂಲಕ ಸ್ಥಾಪಿಸಲಾಗದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.