ರಾಯ್ಪುರ್: ರಮಣ್ ಸಿಂಗ್ ನೇತೃತ್ವದಲ್ಲಿ ಛತ್ತೀಸ್ಗಢ ಬಿಜೆಪಿ ಸರ್ಕಾರ ಇಲ್ಲಿ ನಡೆದ ಮೇಯರ್ ಸ್ಥಾನಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ.
ಛತ್ತೀಸ್ಗಢದ ಬಿಲೈ-ಚರೋಡಾ ಮತ್ತು ಸಾರಂಗಢ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಮಾಂಡಲೆ ಭಿಲೈ-ಚರೋಡಾ ಪುರಸಭಾ ಚುನಾವಣೆಯ ಮೇಯರ್ ಸ್ಥಾನವನ್ನು ಗೆದ್ದುಕೊಂಡಿದ್ದಾರೆ.
ಮಾಂಡಲೆ ಅವರು 20,905 ಮತಗಳನ್ನು ಗೆದ್ದರೆ, ಕಾಂಗ್ರೆಸ್ನ ಜ್ಯೋತಿ ಬಾಂಜರೆ 16,814 ಮತಗಳನ್ನು ಗೆದ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಿಲೈ-ಚರೋಡಾ ಪುರಸಭಾ ಚುನಾವಣೆಯ ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿ 16 ವಾರ್ಡ್ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳು ತಲಾ 12 ವಾರ್ಡ್ಗಳನ್ನು ಗೆದ್ದುಕೊಂಡಿದ್ದಾರೆ.
ಇದೇ ವೇಳೆ ಬಿಜೆಪಿ ಪಕ್ಷದ ಅಭ್ಯರ್ಥಿ ಅಮಿತ್ ಅಗರ್ವಾಲ್ ಸಾರಂಗಢ ಪುರಸಭಾ ಚುನಾವಣೆಯಲ್ಲಿ 1096 ಮತಗಳನ್ನು ಗೆದ್ದಿದ್ದು, ವಿಜೇತ ಎಂದು ಘೋಷಿಸಲಾಗಿದೆ.
ಭಿಲೈ-ಚರೋಡಾ ಪುರಸಭಾ ಚುನಾವಣೆಯ ಜಯ ಪ್ರಧಾನಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ನಡೆಗೆ ಜನರ ಅಪಾರ ಬೆಂಬಲವನ್ನು ಸೂಚಿಸುತ್ತದೆ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.