ನವದೆಹಲಿ: ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಆ್ಯಪಲ್ ಇಂಕ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಂಪೆನಿಯ ಕೆಲವು ಉದ್ಧೇಶಿತ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಮುಂದಿನ ತಿಂಗಳು ಆಂತರಿಕ ಸಚಿವರ ಸಭೆ ನಡೆಸಲಿದೆ.
ಹಣಕಾಸು, ಕಂದಾಯ, ವಾಣಿಜ್ಯ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾ, ಪರಿಸರ ಮತ್ತು ಅರಣ್ಯ ಸಚಿವಾಲಯಗಳ ಹಿರಿಯ ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಐಫೋನ್ ತಯಾರಕ ಆ್ಯಪಲ್ ಭಾರತದ ಉತ್ಪಾದನಾ ವಲಯವನ್ನು ಪ್ರವೇಶಿಸಲು ಸರ್ಕಾರದಿಂದ ತೆರಿಗೆ ಮತ್ತು ಕೈಗಾರಿಕೆಯ ಕೆಲವು ಉದ್ದೇಶಿತ ಪ್ರಯೋಜನಗಳ ಬೇಡಿಕೆಗಳನ್ನು ಮುಂದಿಟ್ಟಿದೆ. ಆದಾಗ್ಯೂ ಉತ್ಪಾದನಾ ಘಟಕ ಸ್ಥಾಪಿಸಲು ಆ್ಯಪಲ್ ಕಂಪೆನಿ ಹೆಚ್ಚುವರಿ ಬೆಂಬಲದ ಬೇಡಿಕೆ ಮಾಡಬಾರದು ಎಂದು ಸರ್ಕಾರ ಬಯಸಿದೆ.
ಭಾರತದಲ್ಲಿ ಅನೇಕ ಕಂಪೆನಿಗಳು ಮೊಬೈಲ್ ಫೋನ್ ತಯಾರಿಸುತ್ತಿದ್ದು, ಯಾವುದೇ ಕಂಪೆನಿ ಹೆಚ್ಚುವರಿ ಬೆಂಬಲದ ಬೇಡಿಕೆ ಮಾಡಿಲ್ಲ. ಅಲ್ಲದೇ ಸರ್ಕಾರ ಇಲೆಕ್ಟ್ರಾನಿಕ್ ಉತ್ಪಾನೆಗೆ ಈಗಾಗಲೇ ಸೂಕ್ತ ಬೆಂಬಲ ಮತ್ತು ಪ್ರಯೋಜನಗಳನ್ನು ಒದಗಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.
ಆ್ಯಪಲ್ ಪ್ರಸ್ತುತ ಜಪಾನ್, ಕೋರಿಯಾ, ಅಮೇರಿಕಾ ಸೇರಿದಂತೆ ಆರು ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.
ಭಾರತದ ಉತ್ಪಾದನಾ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಪ್ರವೇಶಿಸಲು ಬಹುರಾಷ್ಟ್ರೀಯ ಕಂಪೆನಿ ಆ್ಯಪಲ್ ಇಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ಪ್ರಧಾನಿ ಮೋದಿ ಅವರನ್ನು ಮೇ 21, 2016ರಂದು ಭೇಟಿ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.