ನವದೆಹಲಿ: ನವೆಂಬರ್ ೮ರ ಅನಾಣ್ಯೀಕರಣ ನಿರ್ಧಾರ ರಾಜಕೀಯ ಪ್ರೇರಿತ ನಡೆಯಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಬಗ್ಗೆ ಕನಿಕರ ತೋರಿರುವುದಾಗಿ ಹೇಳಿದ್ದಾರೆ.
ಇಂಡಿಯಾ ಟುಡೇ ಮ್ಯಾಗಜಿನ್ಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡುತ್ತಿದ್ದ ಪ್ರದಾನಿ ಮೋದಿ ಅವರು, ಸಂಸತ್ನಲ್ಲಿ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಅನಾಣ್ಯೀಕರಣ ಕುರಿತ ಭಾಷಣದಲ್ಲಿ ಇದೊಂದು ‘ಸಂಯೋಜಿತ ಲೂಟಿ’ ಎಂದು ಹೇಳಿದ್ದರು. ಇದು ತನ್ನ ಸ್ವಂತ ಯುಪಿಎ ಸರ್ಕಾರದ ಸಂದರ್ಭದಲ್ಲಿ ಆಗಿದ್ದಿರಬೇಕು ಎಂದು ಹೇಳಿದ್ದಾರೆ.
ಅಲ್ಪಾವಧಿ ಚುನವಣಾ ರಾಜಕೀಯದ ಬಗ್ಗೆ ಯಾರಾದರೂ ತನಗೆ ಮಾರ್ಗದರ್ಶನ ನೀಡುತ್ತಿದ್ದರೆ ಹಳೆಯ ೫೦೦ ರೂ. ಮತ್ತು ೧೦೦೦ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ವ್ಯಕ್ತಪಡಿಸುತ್ತಿರುವ ಹತಾಶೆಯ ಪ್ರದರ್ಶನದ ಬಗ್ಗೆ ಕನಿಕರವೆನಿಸುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಸಂಪೂರ್ಣವಾಗಿ ಒಂದು ವಿಚಾರದಿಂದ ಆಕ್ರಮಿತಗೊಂಡಿದ್ದಾರೆ- ಅದು ಚುನಾವಣೆ. ಅನಾಣ್ಯೀಕರಣದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಆರ್ಥಿಕತೆಯ ಚುಕ್ಕಾಣಿ ಹಿಡಿದಿದ್ದ, ೪೫ ವರ್ಷ ಅನುಭವ ಹೊಂದಿದ ಮನ್ಮೋಹನ್ ಸಿಂಗ್ ಅವರು ಅನಾಣ್ಯೀಕರಣ ಒಂದು ಅತ್ಯಂತ ಕೆಟ್ಟ ನಿರ್ವಹಣೆ ಎಂದಿರುವುದು ಕುತೂಹಕಾರಿಯಾಗಿದೆ. ಸಂಯೋಜಿತ ಲೂಟಿ ಎಂಬುದು ಮನ್ಮೋಹನ್ ಸಿಂಗ್ ನಾಯಕತ್ವದಲ್ಲಿ ನಡೆದ ಕಲ್ಲಿದ್ದಲು, 2G, ಕಾಮನ್ವೆಲ್ತ್ನಂತಹ ಕೊನೆಯಿಲ್ಲದ ಹಗರಣಗಳಿಗೆ ಸಂಬಂಧಿಸಿದೆ. ಮತ್ತೊಂದೆಡೆ ಅನಾಣ್ಯೀಕರಣ ಭ್ರಷ್ಟರ ಲೂಟಿಯನ್ನು ಕೊನೆಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಅನಾಣ್ಯೀಕರಣ ಕುರಿತು ಮಾತನಾಡಿದ ಪ್ರದಾನಿ ಮೋದಿ ಅವರು, ಡಿಜಿಟಲ್ ವ್ಯವಹಾರ ಒಂದು ನಗದು ವ್ಯವಹಾರ ವಿರುದ್ಧದದ ಅಲ್ಪಾವಧಿ ಪರ್ಯಾಯ ವ್ಯವಸ್ಥೆ ಎಂದು ಪರಿಗಣಿಸಬಾರದು. ಡಿಜಿಟಲ್ ವ್ಯವಹಾರ ಔಪಚಾರಕ ಲೆಕ್ಕಪತ್ರ ಮತ್ತು ಆರ್ಥಿಕತೆ ಸುಧಾರಣೆಗೆ ಅನುಕೂಲವಾಗಿದೆ. ಇದು ಹೆಚ್ಚಿನ ತೆರಿಗೆ ಅನುಸರಣೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.