ಚೆನ್ನೈ: ಒಂದು ಗಮನಾರ್ಹ ಅಭಿವೃದ್ಧಿಯಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ‘ಚಿನ್ನಮ್ಮ’ ಶಶಿಕಲಾ ನಟರಾಜನ್ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುವ ನಿರ್ಣಯಕ್ಕೆ ಎಐಎಡಿಎಂಕೆ ಮಂಡಳಿ ಅಂಗೀಕಾರ ನೀಡಿದೆ.
ಎಐಎಡಿಎಂಕೆ ನಡೆಸಿದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಅಂಗೀಕಾರ ನೀಡಲಾಯಿತು.
ಎಐಎಡಿಎಂಕೆ ಶಶಿಕಲಾ ನಾಯಕತ್ವದಲ್ಲಿ ಕೆಲಸ ನಿರ್ವಹಿಸಲು ಕೈಗೊಂಡ ನಿರ್ಣಯಕ್ಕೆ ಅಂಗೀಕರಿಸಿದೆ ಎಂದು ಪಕ್ಷ ಟ್ವೀಟ್ ಮಾಡಿದೆ.
ಶಶಿಕಲಾ ಅವರು ಈ ಬಗ್ಗೆ ಯಾವುದೇ ಒಪ್ಪಿಗೆ ಸೂಚಿಸಿಲ್ಲ. ಈ ನಿರ್ಧಾರದ ಅಧಿಕೃತ ಘೋಷಣೆಯನ್ನು ಜನವರಿ ೨, ೨೦೧೭ರಂದು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಪನ್ನೀರಸೆಲ್ವಂ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆ ಸ್ವೀರಕರಿಸಲು ಶಶಿಕಲಾ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಸುಮಾರು 14 ನಿರ್ಣಯಗಳಿಗೆ ಅಂಗೀಕಾರ ನೀಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನ ಎಂದುಆಚರಿಸುವ ನಿರ್ಣಯಕ್ಕೂ ಅಂಗೀಕಾರ ನೀಡಲಾಗಿದೆ. ಇದೇ ವೇಳೆ ಜಯಲಲಿತಾ ಅವರಿಗೆ ಮೆಗ್ಸೆಸೆ ಪ್ರಶಸ್ತಿ ಹಾಗೂ ವಿಶ್ವ ಶಾಂತಿಗಾಗಿ ನೊಬೆಲ್ ಪುರಸ್ಕಾರ ನೀಡುವ ನಿರ್ಧಾರಕ್ಕೂ ಅಂಗೀಕಾರ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.