ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತನ್ನ ದೂರಸಂವೇದಿ ಉಪಗ್ರಹ RESOURCESAT-2A ಯಶಸ್ವಿ ಉಡಾವಣೆ ಮಾಡಿದೆ.
1235 ಕೆಜಿ ದೂರಸಂವೇದಿ ಉಪಗ್ರಹವನ್ನು ಬುಧವಾರ ಬೆಳಗ್ಗೆ 10.25ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಪಿಎಸ್ಎಲ್ವಿ ಸಿ-36 ಸಹಾಯದಿಂದ ಉಡಾವಣೆ ಮಾಡಲಾಗಿದೆ. ಇದು ಮುಂದಿನ ೫ ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.
ಇದು 1250 ವ್ಯಾಟ್ ಶಕ್ತಿ ಉತ್ಪಾದನಾ ಸಾಮಥ್ಯವನ್ನು ಹೊಂದಿದೆ.
ಇದು RESOURCESAT-1 ಮತ್ತು RESOURCESAT-2ನಮುಂದುವರಿದ ಭಾಗವಾಗಿದೆ.
ಈ ಉಪಗ್ರಹ ಲೀನಿಯರ್ ಇಮೇಜಿಂಗ್ ಸೆಲ್ಫ್ ಸ್ಕ್ಯಾನರ್ (ಎಲ್ಐಎಸ್ಎಸ್-4), ಕ್ಯಾಮರಾದಿಂದ ತೆಗೆಯಲಾದ ಚಿತ್ರಗಳನು ಸಂಗ್ರಹಿಸಲು 200 ಗಿಗಾ ಬಿಟ್ಸ್ ಸಾಮರ್ಥ್ಯದ ಎರಡು ಘನ ರೆಕಾರ್ಡರ್ ಸೇರಿದಂತೆ 3 ಉಪಕರಣಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.