ಶ್ರೀನಗರ: ಭಾರತದ ಗಡಿಭಾಗ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರತ್ಯೇಕತಾವಾದಿಗಳು ಪಾಕಿಸ್ಥಾನ ಧ್ವಜವನ್ನು ಹಾರಿಸಿದ್ದಾರೆ. ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ ನಡೆಸಿದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.
ಟ್ರಾಲ್ನಲ್ಲಿ ನಡೆದ ಸಮಾವೇಶದಲ್ಲಿ ಕೆಲವರು ಪಾಕಿಸ್ಥಾನದ ಧ್ವಜ ಹಾರಿಸುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಕಳೆದ ತಿಂಗಳಷ್ಟೇ ಮಸರತ್ ಆಲಂ ಪಾಕಿಸ್ಥಾನದ ಧ್ವಜವನ್ನು ಹಾರಿಸಿದ್ದ. ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಇಷ್ಟಾದರೂ ಪ್ರತ್ಯೇಕತಾವಾದಿಗಳು ತಮ್ಮ ಕುಚೋದ್ಯವನ್ನು ಮತ್ತೆ ಪ್ರದರ್ಶನ ಮಾಡಿದ್ದಾರೆ.
ಇದೇ ಸಮಾವೇಶದಲ್ಲಿ ಗಿಲಾನಿ, ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಯನ್ನು ಕೇವಲ ಒಂದು ತಿಂಗಳಿಗಷ್ಟೆ ಸೀಮಿತಗೊಳಿಸಬೇಕು, ಉಳಿದ ಸಂದರ್ಭ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದ್ದಾನೆ.
ಗಿಲಾನಿಯಂತಹ ದೇಶದ್ರೋಹಿಯ ವಿರುದ್ಧ ಜಮ್ಮು ಕಾಶ್ಮೀರ ಸರ್ಕಾರ ಮತ್ತು ಕೇಂದ್ರ ಕಠಿಣಕ್ರಮವನ್ನು ಜರುಗಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.