ಇಂಫಾಲ್: ಮಣಿಪುರದ ಇಂಫಾಲ್ನಲ್ಲಿರುವ ನಿಲಕುಠಿಯಲ್ಲಿ ಆಹಾರ ಸಂಸ್ಕರಣೆ ಪಾರ್ಕ್ನ್ನು ಮಣಿಪುರ ಮುಖ್ಯಮಂತ್ರಿ ಇಬೋಬಿ ಸಿಂಗ್ ಉದ್ಘಾಟಿಸಿದ್ದಾರೆ.
49 ಪ್ಲಾಟ್ಗಳನ್ನೊಳಗೊಂಡ 600 ಚದರ ಅಡಿ ವಿಸ್ತಾರದ ಸ್ಥಳದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಣೆ ಪಾರ್ಕ್ ನಿರ್ಮಿಸಲಾಗಿದೆ. ಇದನ್ನು ವಿವಿಧ ಉದ್ಯಮಿಗಳಿಗೆ ಒದಗಿಸಲಾಗುವುದು.
ಈ ಪಾರ್ಕ್ ಶೀತಲ ವಸ್ತು ಶೇಖರಣೆ, ಗೋದಾಮು, ಒಳಚರಂಡಿ ನೀರು ಹರಿಯುವಿಕೆ, ಸಂಸ್ಕರಣೆ ಘಟಕ ವ್ಯಸ್ಥೆಯನ್ನು ಹೊಂದಿದೆ.
ಪಾರ್ಕ್ನಲ್ಲಿ ಆಹಾರ ಸಂಸ್ಕರಣೆ ಮಾಡುವ ಉದ್ಯಮ ಆರಂಭಿಸಲು ಇಚ್ಛಿಸುವ ನಿರುದ್ಯೋಗಿ ಯುವಕರಿಗೆ ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯದೊಂದಿಗೆ ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವತ್ತ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಮಣಿಪುರ್ ಸ್ಟಾರ್ಟ್ ಅಪ್ ಪಾಲಿಸಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದು ಕೌಶಲ್ಯ ಹೊಂದಿದ ಮತ್ತು ಕೌಶಲ್ಯ ಹೊಂದಿರದ ನಿರುದ್ಯೋಗಿ ಯವಕರಿಗೆ ಲಾಭದಾತಕವಾಗಲಿದೆ. ಖಾಸಗಿ ಕಂಪೆನಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮುಖ್ಯಮಂತ್ರಿ ಇಬೋಬಿ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.