ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾನೂನು ತಿದ್ದುಪಡಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಹೊರತುಪಡಿಸಿ ಆಭರಣಗಳ ಮೇಲಿನ ತೆರಿಗೆ ಮತ್ತು ವಶೀಕರಣ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಸ್ತಾಪಿತ ತಿದ್ದುಪಡಿ ಆಧಾರದಲ್ಲಿ ದಾಖಲೆ ಹೊಂದಿದ ಚಿನ್ನಾಭರಣ ಖರೀದಿ ಅಥವಾ ಕೃಷಿ ಆದಾಯ ಮತ್ತು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮೂಲಕ ಖರೀದಿಸಲಾದ ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರದ ನೇರ ತೆರಿಗೆ ಸಂಸ್ಥೆ ತಿಳಿಸಿದೆ.
ಪ್ರತಿ ಕುಟುಂಬದ ವಿವಾಹಿತ ಮಹಿಳೆಯರು ಗರಿಷ್ಠ 500 ಗ್ರಾಂ ಚಿನ್ನಾಭರಣ, ಅವಿವಾಹಿತ ಮಹಿಳೆಯರು 250 ಗ್ರಾಂ ಚಿನ್ನಾಭರಣ ಮತ್ತು ಪುರುಷರು 100 ಗ್ರಾಂ. ಚಿನ್ನಾಭರಣ ಮನೆಯಲ್ಲಿ ಇರಿಸಬಹುದು. ಇದರ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. ಪ್ರಸ್ತುತ ಮಾರ್ಗಸೂಚಿ ಪ್ರಕಾರ ಇದನ್ನು ತೆರಿಗೆ ಇಲಾಖೆ ವಶಪಡಿಸಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾಯಿದೆಯ ತೆರಿಗೆ ಕಾನೂನು ತಿದ್ದುಪಡಿ ಬಿಲ್ ಪ್ರಸ್ತಾವನೆಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ.
ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ ದಾಖಲೆ ರಹಿತ ಚಿನ್ನಾಭರಣಗಳ ಮೇಲೆ ಶೇ.85% ತೆರಿಗೆ ಮತ್ತು ದಂಡ ವಿಧಿಸುವಂತೆ ಸರ್ಕಾರ ಪ್ರಸ್ತಾಪಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.