ನವದೆಹಲಿ: ಭಾರತ ಮತ್ತು ಅಮೇರಿಕಾ ಬುಧವಾರದಂದು, ವಿದೇಶ ಮಿಲಿಟರಿ ಮಾರಾಟ (ಎಫ್ಎಂಎಸ್)ದ ಮೂಲಕ 145 M777 ಫಿರಂಗಿ ಬಂದೂಕುಗಳ ಖರೀದಿ ಒಪ್ಪಂದ ಹಾಗೂ ಅಂಗೀಕಾರ (ಎಲ್ಒಎ) ಪತ್ರಕ್ಕೆ ಸಹಿ ಹಾಕಿವೆ.
ನವೆಂಬರ್ 17ರಂದು ಸಚಿವ ಸಂಪುಟ ಈ ಬಹು ನಿರೀಕ್ಷಿತ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದರಿಂದ ಭಾರತೀಯ ಸೇನೆಗೆ ಪ್ರಬಲ ಶಕ್ತಿ ಬಂದಂತಾಗಿದೆ.
ಏರ್ ಪೋರ್ಟಬಲ್ 155 ಎಂಎಂ/ 39 ಕ್ಯಾಲಿಬರ್ ಬಂದೂಕು ಗರಿಷ್ಟ 30 ಕಿ.ಮೀ. ಅಂತರದಲ್ಲಿ ಗುಂಡು ಹಾರಿಸಬಲ್ಲದು. ಇದನ್ನು ಬಿಎಇ ಸಿಸ್ಟಮ್ಸ್ ತಯಾರಿಸಿದೆ.
ಈ ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಬಿಎಇ ಸಿಸ್ಟಮ್ ‘ಕಂಪನಿಯು ಮುಂಬರುವ ವಾರಗಳಲ್ಲಿ ಅಮೇರಿಕಾದ ರಕ್ಷಣಾ ಇಲಾಖೆ ಜೊತೆ ಸಹಿ ಹಾಕುವ ನಿರೀಕ್ಷೆಯಲ್ಲಿದ್ದು, ತದನಂತರ ಭಾರತೀಯ ಸೇನೆಗೆ M 777 ಹೂವಿಟ್ಜರ್ ಬಂದೂಕುಗಳನ್ನು ಪೂರೈಸಲಿದೆ’ ಎಂದು ಹೇಳಿದೆ.
ಭಾರತೀಯ ಸೇನೆಗೆ ಯುದ್ಧ ಸಿದ್ದ M777 ಹೋವಿಟ್ಜರ್ ಬಂದೂಕುಗಳನ್ನು ಪೂರೈಸಲು ಅಮೇರಿಕಾದ ರಕ್ಷಣಾ ಇಲಾಖೆ ಜೊತೆ ಮುಂದಿನ ವಾರಗಳಲ್ಲಿ ಒಪ್ಪಂದಕ್ಕೆ ಎದುರು ನೋಡಿತ್ತಿದ್ದೇವೆ ಎಂದು ಬಿಎಇ ಸಿಸ್ಟೆಮ್ಸ್ನ ಉಪಾಧ್ಯಕ್ಷ ಮತ್ತು ಪ್ರಧಾನ ವ್ಯವಸ್ಥಾಪಕ ಜೋ ಸೆಂಟೆಲ್ ತಿಳಿಸಿದ್ದಾರೆ.
ದೇಶೀಯ ಶಾಸನ, ಏಕೀಕರಣ ಮತ್ತು ಪರೀಕ್ಷೆ ಸೌಲಭ್ಯದೊಂದಿಗೆ ಮೇಕ್ ಇನ್ ಇಂಡಿಯಾ ಜೊತೆಗಿನ ಬದ್ಧತೆಯನ್ನು ಪ್ರದರ್ಶಿಸುವುದು ನಮ್ಮ ಗುರಿಯಾಗಿದೆ ಎಂದು ಸೆಂಟೆಲ್ ತಿಳಿಸಿದ್ದಾರೆ.
ಒಟ್ಟು 145 ಬಂದೂಕುಗಳಲ್ಲಿ 25 ಬಂದೂಕುಗಳನ್ನು ಬಿಎಇ ತಯಾರಿಸಲಿದ್ದು, ಉಳಿದ 120 ಬಂದೂಕುಗಳನ್ನು ಭಾರತದ ಮಹೀಂದ್ರ ಕಂಪನಿ ತಯಾರಿಸಲಿದೆ ಎಂದು ಕಂಪೆನಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.