ಮೊಹಾಲಿ: ಭಾರತದ ಸ್ಪಿನ್ನರ್ಗಳು ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿದ್ದು, ಆತಿಥೇಯ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ೮ ವಿಕೆಟ್ಗಳ ಜಯದೊಂದಿಗೆ 2-0 ಮುನ್ನಡೆ ಸಾಧಿಸಿದೆ.
ರವಿಚಂದ್ರನ್ ಅಶ್ವಿನ್ (3/81), ರವೀಂದ್ರ ಜಡೇಜಾ (2/62) ಹಾಗೂ ಜಯಂತ್ ಯಾದವ್ (2/21) ಕೈಚಳಕದಿಂದಾಗಿ ಇಂಗ್ಲೆಂಡ್ ತಂಡ ತನ್ನ ಎರಡೇ ಇನ್ನಿಂಗ್ಸ್ನಲ್ಲಿ 236 ರನ್ಗಳಿಗೆ ಆಲೌಟ್ ಆಯಿತು. 103 ರನ್ಗಳ ಗುರಿ ಪಡೆದ ಭಾರತ, ಪಾರ್ಥಿವ್ ಪಟೇಲ್ (ಅಜೇಯ 67) ಅವರ ಸಹಾಯದಿಂದ ಸುಲಭ ಜಯ ಸಾಧಿಸಿದೆ.
ಇಂಗ್ಲೆಂಡ್ ಪರ ಜೋ ರೂಟ್ ಅತ್ಯಧಿಕ 78 ರನ್ ಬಾರಿಸಿದರೆ, ಹಸೀಬ್ ಹಮೀದ್ 59 ರನ್ ಬಾರಿಸಿದರು.
ಇದಕ್ಕೂ ಮುನ್ನ ಭಾರತದ ಪರ ಜಡೇಜಾ 90, ಮತ್ತು ಅಶ್ವಿನ್ 72 ಅವರ ಸಹಯೋಗದಿಂದ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯಲು ಕಾರಣರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.