ಶಬರಿಮಲೆ: ನೋಟು ನಿಷೇಧದ ಹಿನ್ನೆಲೆಯಲ್ಲಿ ಹಣ ವಿನಿಮಯದ ಸಮಸ್ಯೆಯನ್ನು ನಿವಾರಿಸಲು ಶಬರಿಬಲೆಯ ಅಯ್ಯಪ್ಪ ದೇವಾಲಯ ‘ಇ-ಹುಂಡಿ’ ಅಥವಾ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಪರಿಚಯಿಸಿದೆ.
ನವೆಂಬರ್ 16 ರಿಂದ ಶಬರಿಮಲೆಯಲ್ಲಿ ತೀರ್ಥಯಾತ್ರೆ ಆರಂಭವಾಗಿದ್ದು, ದೇಶದಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಮೂರು ತಿಂಗಳ ಕಾಲ ನಡೆಯುವ ಮಂಡಲಮ್ ಮಕರವಿಳಕ್ಕು ಹಬ್ಬದ ಸಂದರ್ಭ ಲಕ್ಷಾಂತರ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಅಯ್ಯಪ್ಪ ದೇವಾಲಯ ನವೆಂಬರ್ 15 ರಿಂದ ಭಕ್ತಾದಿಗಳಿಗೆ ತೆರೆಯಲಾಗಿದೆ.
ಕಾರ್ಡ್ ಸ್ವೈಪ್ ಮಾಡುವ ಮೂಲಕ ಭಕ್ತಾದಿಗಳು ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಡೆಬಿಟ್ ಕಾರ್ಡ್ ಮೂಲಕ ದೇವರಿಗೆ ಅರ್ಪಣೆ ಸಲ್ಲಿಸಲು ಯಾವುದೇ ಮಿತಿ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಭಕ್ತಾದಿಗಳು ಕೇವಲ 1 ರೂ. ಕಾಣಿಕೆಯನ್ನೂ ಅರ್ಪಿಸಬಹುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯ ಅಜಯ್ ತಾರಾಯಿಲ್ ಹೇಳಿದ್ದಾರೆ.
ಶಬರಿಮಲೆ ದೇವಾಲಯ ಅಲ್ಲದೇ ದೇಶದಾದ್ಯಂತ ಹಲವಾರು ದೇವಾಲಯಗಳಲ್ಲಿ ಇ-ಹುಂಡಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.