ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ವಿರುದ್ಧ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ವಿರೋಧ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಈ ಸಂದರ್ಭ ಸಮಾಜವಾದಿ ಪಕ್ಷದ ನರೇಶ್ ಅಗ್ರವಾಲ್ ಅವರ ಹಾಸ್ಯಾಸ್ಪದ ಪಂಚ್ಲೈನ್ ಪ್ರಧಾನಿ ಮೋದಿ ಮತ್ತು ಸಚಿವ ಅರುಣ್ ಜೇಟ್ಲಿ ಅವರು ನಗುವಂತೆ ಮಾಡಿದೆ.
‘ನೋಟ್ ಬ್ಯಾನ್ ವೇಳೆ ಪ್ರಧಾನಿ ಮೋದಿ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅರುಣ್ ಜಿ ಈ ಬಗ್ಗೆ ತಿಳಿದಿದ್ದರೆ ಅವರು ಈ ವಿಷಯವನ್ನು ನಮ್ಮ ಕಿವಿಯಲ್ಲಿ ಪಿಸುಗುಡುತ್ತಿದ್ದರು. ಅವರು ನನಗೆ ಪರಿಚಿತರು’ ಎಂದು ನರೇಶ್ ಅಗ್ರವಾಲ್ ಹೇಳಿದ್ದರು.
ಈ ವೇಳೆ ಪ್ರಧಾನಿ ಮೋದಿ ಹಾಗೂ ಅರುಣ್ ಜೇಟ್ಲಿ ಅವರು ಜೋರಾಗಿ ನಕ್ಕರು.
ತನ್ನ ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದು, ಕನಿಷ್ಟ ಪಕ್ಷ ಉತ್ತರ ಪ್ರದೇಶದಲ್ಲಿ ನಿಮ್ಮ ಸುರಕ್ಷತೆ ಬಗ್ಗೆ ಚಿಂತೆ ಮಾಡಬೇಡಿ ಎಂದು ಪ್ರಧಾನಿ ಕುರಿತು ಅಗ್ರವಾಲ್ ಹೇಳಿದ್ದಾರೆ.
ನೋಟು ನಿಷೇಧದ ನಂತರ ಭಾಷಣವೊಂದರಲ್ಲಿ ಪ್ರಧಾನಿ ಮೋದಿ ಅವರು, ‘ಭ್ರಷ್ಟಚಾರ ನಿರ್ಮೂಲನೆಯ ಈ ನಿರ್ಧಾರಕ್ಕೆ ಕೆಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ತನ್ನನ್ನು ಬದುಕಲು ಬಿಡದೇ ಇರಬಹುದು’ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.