ನವದೆಹಲಿ: ರಿಲಯನ್ಸ್ ಜಿಯೋ 4G ವೆಲ್ಕಮ್ ಆಫರ್ನಿಂದಾಗಿ ಅದರ ಗ್ರಾಹಕರ ಸಂಖ್ಯೆ ಕೇವಲ ಒಂದು ತಿಂಗಳಿನಲ್ಲಿ 16 ಮಿಲಿಯನ್ಗೆ ತಲುಪಿದ್ದು, ದೇಶದ ಟೆಲಿಕಾಂ ಉದ್ಯಮವನ್ನು ಉತ್ತುಂಗಕ್ಕೇರಿಸಿತ್ತು.
ಇದರಿಂದ ಇತರ ಟೆಲಿಕಾಂ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದು, ಇದೀಗ ಏರ್ಟೆಲ್ ಹೊಸ 3G/4G ಡಾಟಾ ಆಫರ್ ಬಿಡುಗಡೆ ಮಾಡಿದೆ.
ಏರ್ಟೆಲ್ ಕಂಪೆನಿ ಕೇವಲ 2249 ರೂ.ಗೆ ಅನಿಯಮಿತ ಕರೆಗಳ (ಸ್ಥಳೀಯ ಮತ್ತು ಎಸ್ಟಿಡಿ) ಜೊತೆಗೆ 18GB 3G/4G ಡಾಟಾ ಆಫರ್ನ್ನು ಬಿಡುಗಡೆ ಮಾಡಿರುವುದಾಗಿ ಅಧಿಕೃತ ವರದಿ ತಿಳಿಸಿದೆ. 28 ದಿನಗಳ ವೆಲಿಡಿಟಿಯೊಂದಿಗೆ ಕಂಪೆನಿಯಿಂದ ಎಸ್ಎಂಎಸ್ ಸ್ವೀಕರಿಸಿದ ಆಯ್ದ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ.
ಪ್ರೀಪೇಡ್ ಗ್ರಾಹಕರು ಏರ್ಟೆಲ್ ಸ್ಟೋರ್ ಮೂಲಕ ನಿಗದಿತ ಹಣ ಪಾವತಿಸಿ ಈ ಆಫರ್ ಪಡೆಯಬಹುದು. ಇಲ್ಲವೇ ‘MyAirtel App’ ಮೂಲಕ ‘ವಿಶೇಷ ಆಫರ್’ ವಿಭಾಗದ ಸಹಾಯದಿಂದ ರೂ.2249 ಪ್ಲಾನ್ಗೆ ಕ್ಲಿಕ್ ಮಾಡಿ 24 ಗಂಟೆ ಒಳಗೆ ಈ ಆಫರ್ಗೆ ಸಕ್ರಿಯರಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.