ನವದೆಹಲಿ: ಯೋಗ ಗುರು ರಾಮ್ದೇವ್ ಬಾಬಾ ಅವರ ಒಡೆತನ ದಿವ್ಯ ಫಾರ್ಮಸಿ ತಯಾರಿಸುತ್ತಿರುವ ಬಂಜೆತನ ನಿವಾರಕ ‘ದಿವ್ಯ ಪುತ್ರ ಜೀವಕ್ ಬೀಜ’ ಔಷಧಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಗುರುವಾರ ಭಾರೀ ಗದ್ದಲ ಏರ್ಪಟ್ಟಿತು.
ಜೆಡಿಯು ನಾಯಕ ಕೆಸಿ ತ್ಯಾಗಿ ಈ ಔಷಧದ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, ದಿವ್ಯ ಪುತ್ರಜೀವಕ್’ ಔಷಧ ಹೆಸರೇ ಸೂಚಿಸುವಂತೆ ಗಂಡುಮಕ್ಕಳ ಜನನದ ಭರವಸೆಯನ್ನು ನೀಡುತ್ತದೆ. ಆ ಮೂಲಕ ಲಿಂಗ ತಾರತಮ್ಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಅಲ್ಲದೇ ಇಂತಹ ಔಷಧ ಮಾರುವ ರಾಮ್ದೇವ್ರನ್ನು ಹರಿಯಾಣ ಸರ್ಕಾರ ಯೋಗ ರಾಯಭಾರಿಯನ್ನಾಗಿ ನೇಮಿಸಿದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇತರ ಪ್ರತಿಪಕ್ಷಗಳ ಸದಸ್ಯರು ಕೂಡ ತ್ಯಾಗಿ ಮಾತಿಗೆ ಧ್ವನಿಗೂಡಿಸಿ ದಿವ್ಯ ಫಾರ್ಮಸಿ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಇದು ವೈಜ್ಞಾನಿಕ ಮನೋಧರ್ಮಕ್ಕೆ ವಿರುದ್ಧವಾದ ಔಷಧಿ ಎಂದು ಸಿಪಿಎಂ ಆರೋಪಿಸಿದೆ.
ಈ ಆರೋಪವನ್ನು ತಳ್ಳಿ ಹಾಕಿರುವ ದಿವ್ಯ ಫಾರ್ಮಸಿ, ಈ ಔಷಧ ಕೇವಲ ಬಂಜೆತನವನ್ನು ನಿವಾರಣೆ ಮಾಡುತ್ತದೆಯೇ ಹೊರತು ಗಂಡು ಮಗುವಿನ ಭರವಸೆ ನೀಡುವುದಿಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.