ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳಲು ಎಎಪಿ ನಾಯಕರ ಪ್ರಚೋದನಕಾರಿ ಭಾಷಣ ಮತ್ತು ಅಲ್ಲಿ ನೆರೆದಿದ್ದವರ ಪ್ರಚೋದನೆಯೇ ಪ್ರಮುಖ ಕಾರಣವಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
‘ಸಮಾವೇಶದಲ್ಲಿ ಎಎಪಿ ನಾಯಕರು ಪ್ರಚೋದನಾತ್ಮಕವಾಗಿ ಭಾಷಣ ಮಾಡುತ್ತಿದ್ದರು, ನೆರೆದಿದ್ದ ಕಾರ್ಯಕರ್ತರು ಕೂಡ ರೈತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದರು’ ಎಂದು ಕೇಂದ್ರ ಗೃಹಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ದೆಹಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಅಲ್ಲದೇ ಜಂತರ್ ಮಂತರ್ನಿಂದ ರಾಮಲೀಲಾಗೆ ಸಮಾವೇಶವನ್ನು ಸ್ಥಳಾಂತರಿಸಿ ಎಂಬ ನಮ್ಮ ಸೂಚನೆಗೂ ಎಎಪಿ ಬೆಲೆ ಕೊಡಲಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.
ಎಎಪಿ ಪೊಲೀಸರ ಆರೋಪವನ್ನು ತಳ್ಳಿ ಹಾಕಿದೆ. ಪೊಲೀಸರು ಗಜೇಂದ್ರನ ಸಾವಿಗೆ ನಾವು ಕಾರಣ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.