ಬೆಳ್ತಂಗಡಿ: ಸರಕಾರ ಮಾಡಿಸುತ್ತಿರುವ ಜಾತಿಗಣತಿ ಬೆಳ್ತಂಗಡಿ ತಾಲೂಕಿನಲ್ಲಿ ಶೇ.90ರಷ್ಟು ಪೂರ್ಣವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಎಂ. ಲಿಂಗಪ್ಪ ಹೇಳಿದರು.
ಅವರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಮಾಡಿರುವ ಕೆಲಸದ ಕುರಿತು ನಿಖರ ಮಾಹಿತಿ ನೀಡಿ ಎಂದು ಕಟ್ಟುನಿಟ್ಟಾಗಿ ಮೇಲ್ವಿಚಾರಕರಿಗೆ ಸೂಚಿಸಿದ ಅವರು, ಸಮರ್ಪಕವಾಗಿ ಗಣತಿ ಕಾರ್ಯ ನಡೆಸಬೇಕು. ಆಸಕ್ತಿಯಿಂದ ಮಾಡಿ ಎಂದರು. ಮುಲ್ಕಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಗಣತಿ ಕಾರ್ಯ ಮುಗಿದಿದೆ. ಅಂತಹ ಉತ್ಸಾಹ ಎಲ್ಲೆಡೆ ಕಂಡುಬರಲಿ. ಮನೆ, ಮನೆ ಗಣತಿ ಮುಗಿದ ಬಳಿಕ ಉದ್ಯೋಗ ಅರಸಿ ಬಂದವರ, ಅಲೆಮಾರಿಗಳ ಗಣತಿ ಕಾರ್ಯ ನಡೆಸಬೇಕು ಎಂದು ಸೂಚಿಸಿದರು. ಫಾರಂ ಇಲ್ಲ ಎಂದು ಕೆಲಸ ನಿಲ್ಲಿಸಬೇಡಿ. ಇತರರ ಜೊತೆ ಪಡೆದು ಕೆಲಸ ಮುಂದುವರಿಸಿ ಎಂದರು.
ಪುತ್ತೂರು ಸಹಾಯಕ ಕಮಿಷನರ್ ಬಸವರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಪುಟ್ಟ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ಉಪಸ್ಥಿತರಿದ್ದರು. ತಾಲೂಕಿನ ೮೪ ಗಣತಿ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.