ಹುಬ್ಬಳ್ಳಿ: ಕಲೆಗೆ ಯಾವುದೇ ಭಾಷೆಯ ಮಿತಿಯಿಲ್ಲ, ಅದಕ್ಕೇ ನಿರ್ದಿಷ್ಟ ಗಡಿಗೂ ಸೀಮಿತವಲ್ಲ. ಓರ್ವ ಕಲಾವಿದ ಎಲ್ಲ ರೀತಿಯ ಕಲೆಯನ್ನು ಅರಿತಿದ್ದರೆ ಆತ ಯಾವದನ್ನು ಬೇಕಾದರು ಒಂದು ಮೇರುಕೃತಿ, ರೂಪ, ಕಲೆಯನ್ನು ರಚಿಸಬಲ್ಲನು.
ಅಂತಹ ಕಲಾವಿದರಲ್ಲಿ ಕರ್ನಾಟಕದ ಹುಬ್ಬಳ್ಳಿಯ ಶಿವಲಿಂಗಪ್ಪ ಬಡಿಗೇರ್ ದಂಪತಿಗಳು ಒಬ್ಬರು. ಈ ಹಿಂದೆ ದಸರಾ ಹಬ್ಬದ ಸಂದರ್ಭ ಎಪಿಜೆ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ರಚಿಸಿದ್ದ ಅವರು ಶ್ಯಾವಿಗೆ ಬಳಸಿ ವಿವಿಧ ರೀತಿಯ ಪ್ರತಿಮೆಗಳನ್ನು ರಚಿಸಿದ್ದಾರೆ.
ಶಿವಲಿಂಗಪ್ಪ ಬಡಿಗೇರ್ ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಶ್ಯಾವಿಗೆ ಬಳಸಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಪ್ರತಿಮೆ ನಿರ್ಮಿಸಲಿದ್ದಾರೆ. ಅದನ್ನು ಮೈಸೂರು ನಗರದಲ್ಲಿ ಪ್ರದರ್ಶನಕ್ಕೆ ಇರಿಸಲು ಯೋಚನೆ ಹೊಂದಿದ್ದಾರೆ.
ಶಿವಲಿಂಗಪ್ಪ ಅವರು ತಮ್ಮ ಕಲಾಸಾಧನೆಗೆ ಜನರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.
ಪ್ರತಿಯೊಬ್ಬರೂ ಪ್ರತಿಮೆಗಳನ್ನು ರಚಿಸಲು ಮಣ್ಣು, ಮರಳು, ಕಲ್ಲುಗಳನ್ನು ಬಳಸುತ್ತಾರೆ. ಇದಕ್ಕಿಂತ ವಿಶೇಷವಾಗಿ ಪ್ರತಿಮೆಗಳನ್ನು ನಿರ್ಮಿಸಲು ನಾನು ಶ್ಯಾವಿಗೆಯನ್ನು ಬಳಸುತ್ತಿದ್ದೇನೆ. ಇದಕ್ಕೆ ನನಗೆ ನನ್ನ ತಾಯಿ ಪೇರಣೆಯಾಗಿದ್ದಾರೆ ಎಂದು ಶಿವಲಿಂಗಪ್ಪ ಬಡಿಗೇರ್ ಹೇಳಿದ್ದಾರೆ.
ದೇವರಾಜ್ ಅರಸ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಮೆಗಳನ್ನು ರಚಿಸುವಂತೆ ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆಗೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.